ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದೆ. ಇನ್ನೇನು ರಾಮಮಂದಿರ ಕಟ್ಟಡ ಕಾಮಗಾರಿ ಪ್ರಾರಂಭವಾದಂತೆಯೇ ಸರಿ. ಇದರ ಮಧ್ಯೆ ಉತ್ತರ ಪ್ರದೇಶ ಸರಕಾರಕ್ಕೆ ಸಿಎಂ ಯಡಿಯೂರಪ್ಪ ಮನವಿಯೊಂದನ್ನು ಮಾಡಿದ್ದಾರೆ.
ರಾಮಮಂದಿರ ಅನೇಕರ ಭಾವನೆ ಅಂದರೆ ತಪ್ಪಾಗಲಿಕ್ಕಿಲ್ಲ. ರಾಜ್ಯದಲ್ಲೂ ಕೋಟ್ಯಾಂತರ ಮಂದಿ ರಾಮಭಕ್ತರು ಇದ್ದಾರೆ. ಹೀಗಾಗಿ ರಾಜ್ಯದಿಂದ ಅಯೋಧ್ಯೆಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗಾಗಿ ಯಾತ್ರಿ ನಿವಾಸ ನಿರ್ಮಾಣ ಮಾಡಲು 2 ಎಕರೆ ಜಮೀನನ್ನು ಮಂಜೂರು ಮಾಡುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ರಾಮ ಮಂದಿರ ನಿರ್ಮಾಣ ಕೋಟ್ಯಾಂತರ ಹಿಂದೂಗಳ ಕನಸು. ಈ ಕನಸು ಇದೀಗ ನನಸಾಗುತ್ತಿದೆ. ಅಷ್ಟೆ ಅಲ್ಲ ಅದೆಷ್ಟೋ ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಆಗಷ್ಟ್ 5ನ್ನು ಹಿಂದೂಗಳ ಹಬ್ಬ ಎಂದೇ ಹಲವಾರು ಮಂದಿ ಕರೆದಿದ್ದಾರೆ.