ಬೆಳಗಾವಿ: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪೋಷಕರು ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದು, ನನ್ನ ಮಗಳು ಒತ್ತಡದಲ್ಲಿದ್ದಾಳೆ ಹಾಗಾಗಿ ಈ ಪರಿಸ್ಥಿತಿಯಲ್ಲಿ ಆಕೆಯ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಾರದು ಎಂದು ಯುವತಿಯ ತಂದೆ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವತಿ ತಂದೆ, ನನ್ನ ಪುತ್ರಿಯನ್ನು ರಾಜಕೀಯ ದಾಳವಾಗಿ ಬಳಸಿದ್ದಾರೆ. ಮೊದಲು ನಮ್ಮ ಮಗಳು ಅಲ್ಲಿಂದ ಹೊರಬರಬೇಕು. ಆಕೆಯ ಮೇಲೆ ಡಿ.ಕೆ.ಶಿವಕುಮಾರ್ ಕಡೆಯವರು ಒತ್ತಡ ಹೇರಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಮೊದಲು ಅವಳು ಒತ್ತಡದಿಂದ ಹೊರಬಂದು ಹೇಳಿಕೆಗಳನ್ನು ದಾಖಲಿಸಲಿ ಎಂದರು.
ರಮೇಶ್ ಜಾರಕಿಹೊಳಿಯ ಪೇಯ್ಡ್ ಪುಂಡರು ಕಾನೂನು, ಪೊಲೀಸರು ಕಸಕ್ಕೆ ಸಮಾನ ಎಂಬಂತೆ ವರ್ತಿಸುತ್ತಿದ್ದಾರೆ; ಕಾಂಗ್ರೆಸ್ ಆಕ್ರೋಶ
ನನ್ನ ಮಗಳಿಗೆ ಡಿಕೆಶಿ ಕಡೆಯವರು ಚಿತ್ರಹಿಂಸೆ ನೀಡಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ಆಕೆಯನ್ನು ಮೊದಲು ನಮಗೆ ಒಪ್ಪಿಸಿ ನಾಲ್ಕು ದಿನಗಳ ಕಾಲ ಆಕೆಯನ್ನು ನಮ್ಮ ಬಳಿಗೆ ಕಳುಹಿಸಿ. ಬಳಿಕ ಆಕೆ ನೀಡುವ ಹೇಳಿಕೆಗಳನ್ನು ಪಡೆದುಕೊಳ್ಳಿ. ಆಕೆ ಒತ್ತಡದಲ್ಲಿ ನೀಡುವ ಹೇಳಿಕೆಯನ್ನು ಪರಿಗಣಿಸಬಾರದು ಎಂದು ಹೇಳಿದರು.
ನಾನು ಮಾಜಿ ಸೈನಿಕನಿರುವುದರಿಂದ ನನ್ನ ಮಗಳ ರಕ್ಷಣೆಗೆ ನಾನು ಬದ್ಧ. ಅವಳು ನಮ್ಮ ಬಳಿ ಇರಲು ಇಚ್ಚಿಸುವುದಾದರೆ ಅದೆಲ್ಲವನ್ನೂ ಬಿಟ್ಟು ನಮ್ಮ ಬಳಿ ಬರಲಿ. ನಾವು ಆಕೆಯನ್ನು ರಕ್ಷಿಸುತ್ತೇವೆ. ಒಂದು ವೇಳೆ ಅವಳು ನಮ್ಮ ಬಳಿ ಬರಲು ಇಚ್ಛಿಸುವುದಿಲ್ಲ ಎನ್ನುವುದಾದರೆ ಅದನ್ನು ಕೋರ್ಟ್ ಮುಂದೆ ಹೇಳಲಿ ನ್ಯಾಯಾಲಯವೇ ನಿರ್ಧರಿಸಲಿ ಎಂದು ಹೇಳಿದರು.