ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿ ತನಗೆ ಹಾಗೂ ತನ್ನ ತಂದೆ – ತಾಯಿಗಳಿಗೆ ರಕ್ಷಣೆ ನೀಡುವಂತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗ ಯುವತಿ ರಕ್ಷಣೆ ನಮ್ಮ ಜವಾಬ್ದಾರಿ ಎಂದು ಹೇಳಿದೆ.
ಈ ಕುರಿತು ಮಾತನಾಡಿರುವ ಮಹಿಳಾ ಆಯೋಗದ ಅಧ್ಯಕ್ಷೆ, ಒಂದು ಹೆಣ್ಣು ಮಗಳು ತಾನು ತೊಂದರೆಯಲ್ಲಿದ್ದೇನೆ ರಕ್ಷಣೆ ನೀಡಿ ಎಂದು ಕೇಳುವಾಗ ರಕ್ಷಣೆ ನೀಡುವುದು ಮಹಿಳಾ ಆಯೋಗದ ಕರ್ತವ್ಯ. ಹಾಗಾಗಿ ಸಿಡಿಯಲ್ಲಿರುವ ಯುವತಿ ಯಾರೇ ಆಗಿರಲಿ, ಆಕೆ ಯಾರು? ಆಕೆಯ ಹಿನ್ನೆಲೆಯೇನು? ಆಕೆಯ ಹಿಂದೆ ರಾಜಕೀಯ ನಾಯಕರಿದ್ದಾರೆಯೇ ಇದೆಲ್ಲವೂ ನಮಗೆ ಅನಗತ್ಯ. ಆಕೆ ಒಂದು ಹೆಣ್ಣುಮಗಳು ಎಂಬ ಕಾರಣಕ್ಕೆ ಆಯೋಗದಿಂದ ರಕ್ಷಣೆ ನೀಡುವುದು ಜವಾಬ್ದಾರಿ ಎಂದು ಹೇಳಿದರು.
ನನ್ನ ಬಳಿಯೂ ಮಹತ್ವದ ಎವಿಡೆನ್ಸ್ ಗಳಿವೆ; ಬಿಡುಗಡೆ ಮಾಡಿದರೆ ʼಶಾಕ್ʼ ಆಗ್ತೀರಾ ಎಂದ ರಮೇಶ್ ಜಾರಕಿಹೊಳಿ
ಹಾಗಾಗಿ ಸಿಡಿ ಯುವತಿ ಧೈರ್ಯವಾಗಿ ಬಂದು ಆಯೋಗಕ್ಕೆ ದೂರು ನೀಡಬಹುದು. ಆಕೆಯ ರಕ್ಷಣೆ ಜವಾಬ್ದಾರಿ ನಮ್ಮದು. ಈ ಬಗ್ಗೆ ಈಗಾಗಲೇ ನಾನು ಗೃಹ ಇಲಾಖೆಗೆ ಹಾಗೂ ಪೊಲೀಸ್ ಕಮೀಷನರ್ ಅವರಿಗೂ ಮಾಹಿತಿ ನೀಡಿದ್ದೇನೆ. ಯುವತಿ ಹೆದರುವ ಅಗತ್ಯವಿಲ್ಲ ದೂರು ನೀಡಲಿ ಎಂದು ಹೇಳಿದ್ದಾರೆ.