ಸಡಗರ ಸಂಭ್ರಮದ ಯುಗಾದಿ ಹಬ್ಬ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಹೀಗಾಗಿ ಹಬ್ಬದಂದು ಊರಿಗೆ ತೆರಳಲು ಬಯಸಿದವರಿಗೆ ನಿರಾಸೆಯಾಗಿತ್ತು. ಅಂತವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ.
ನೈರುತ್ಯ ರೈಲ್ವೆ, ಹಬ್ಬಕ್ಕಾಗಿ ಊರಿಗೆ ತೆರಳಲು ಬಯಸುವವರಿಗಾಗಿ ವಿಶೇಷ ರೈಲು ಸಂಚಾರ ಆರಂಭಿಸಲಿದ್ದು, ಶನಿವಾರದಿಂದ ವಾರಂತ್ಯದ ರಜೆ ಜೊತೆಗೆ ಏಪ್ರಿಲ್ 13ರಂದು ಈ ವಿಶೇಷ ರೈಲು ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸಲಿದೆ.
ಮೂರನೇ ದಿನಕ್ಕೆ ಮುಷ್ಕರ, ಪ್ರಯಾಣಿಕರು ಹೈರಾಣ: ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ: ಸಿಬ್ಬಂದಿ ವಜಾ
ಏಪ್ರಿಲ್ 9ರಂದು ರಾತ್ರಿ 11:45 ಕ್ಕೆ ಬೆಂಗಳೂರಿನ ಯಶವಂತಪುರದಿಂದ ಹೊರಡಲಿರುವ ಈ ರೈಲು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿ ಮಾರ್ಗವಾಗಿ ಬೆಳಗ್ಗೆ 6 ಗಂಟೆಗೆ ಶಿವಮೊಗ್ಗ ತಲುಪಲಿದೆ. ಪುನಃ ಬೆಳಗ್ಗೆ 9 ಗಂಟೆಗೆ ಶಿವಮೊಗ್ಗದಿಂದ ಹೊರಡಲಿರುವ ಈ ರೈಲು ಇದೇ ಮಾರ್ಗದ ಮೂಲಕ 3:30 ಕ್ಕೆ ಯಶವಂತಪುರ ಹಾಗೂ ಸಂಜೆ 4:15ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ತಲುಪಲಿದೆ. ಪ್ರಯಾಣಿಕರು ಆನ್ಲೈನ್ ಮೂಲಕ ತಮ್ಮ ಟಿಕೆಟ್ ಗಳನ್ನು ಕಾಯ್ದಿರಿಸಬಹುದಾಗಿದೆ.