ಬೆಂಗಳೂರು: ಕೊರೊನಾ ಮೂರನೇ ಹಂತದ ಲಸಿಕೆ ನೀಡಿಕೆ ಆರಂಭವಾಗಿದೆ. ಎಲ್ಲರೂ ಲಸಿಕೆ ಪಡೆಯುವುದು ಮುಖ್ಯ. ಹೀಗಾಗಿ ಯಾರು ಯಾರು ಎಲ್ಲೆಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಪಡೆದುಕೊಳ್ಳಲಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಇನ್ನೆರಡು ದಿನಗಳಲ್ಲಿ ನಾನೂ ಕೂಡ ಲಸಿಕೆ ಹಾಕಿಸಿಕೊಳ್ಳಲಿದ್ದೇನೆ. ಮನೇಲಿ ಹಾಕಿಸಿಕೊಳ್ಳಬೇಕಾ ಅಥವಾ ಆಸ್ಪತ್ರೆಯಲ್ಲಿ ಹಾಕಿಸಿಕೊಳ್ಳಬೇಕಾ ಎಂದು ನೋಡುತ್ತೇನೆ ಎಂದರು.
ಈ ಸರ್ಕಾರದಲ್ಲಿ ಯಾರು ಏನು ಬೇಕಾದ್ರೂ ಮಾಡಬಹುದು: ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ
ಇದೇ ವೇಳೆ ನಾನು ರಾಘವೇಂದ್ರ ಸ್ವಾಮಿಗಳ ಭಕ್ತ. ಹಾಗಾಗಿಯೇ ನನ್ನ ಇಬ್ಬರು ಮಕ್ಕಳಿಗೂ ರಾಯರ ಹೆಸರನ್ನು ಇಟ್ಟಿದ್ದೇನೆ. ಒಂದು ದಿನವೂ ಗುರುರಾಯರ ಸ್ಮರಣೆ ಮಾಡದೇ ಇರುವುದಿಲ್ಲ. ಅವರ ಆಶೀರ್ವಾದದಿಂದಲೇ ನಾನಿಂದು ಈ ಹುದ್ದೆಗೆ ಬಂದಿದ್ದೇನೆ ಎಂದು ತಿಳಿಸಿದರು.
ಮಾರ್ಚ್ 8ರಂದು ನಾನು ಬಜೆಟ್ ಮಂಡಿಸುತ್ತೇನೆ. ಈ ಬಜೆಟ್ ನ ಪೂರ್ಣ ಫಲ ರಾಜ್ಯದ ಜನತೆಗೆ ಸಿಗಲಿ. ಈ ಬಾರಿ ಬಜೆಟ್ ಎಲ್ಲ ವರ್ಗದ ಜನರಿಗೂ ಅನುಕೂಲವಾಗುವಂತಹ ಬಜೆಟ್ ಆಗಿರುತ್ತದೆ ಎಂದರು.