alex Certify ಮೋದಿಯವರ ಮೌನ ಸರಿಯಲ್ಲವೆಂದ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿಯವರ ಮೌನ ಸರಿಯಲ್ಲವೆಂದ ಸಿದ್ದರಾಮಯ್ಯ

ಚೀನಾ ಗಡಿ ಕ್ಯಾತೆ ವಿಚಾರವಾಗಿ ಸಾಕಷ್ಟು ಹೇಳಿಕೆಗಳು ಕೇಳಿ ಬರುತ್ತಿವೆ. ಯೋಧರ ಜೀವ ಬಲಿ ಪಡೆದ ಚೀನಾ ವಿರುದ್ಧ ದೇಶದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಚೀನಾ ಕ್ಯಾತೆಯ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿದ್ದು, ಪ್ರಧಾನಿ ಮೋದಿ ಮೌನದ ಕುರಿತು ಸಿದ್ದರಾಮಯ್ಯ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಹೌದು, ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆ ಮುಗಿದ ನಂತರ ಮಾತನಾಡಿದ ಅವರು, ಇಂತಹ ಸಮಯದಲ್ಲಿ ಮೋದಿ ಸುಮ್ಮನಿರುವುದು ಸರಿಯಲ್ಲ. ದೇಶದ ಜನತೆಗೆ ಅವರೇ ಅಭಯ ನೀಡಬೇಕು. ನಮ್ಮ ಸೈನಿಕರ ಬಲಿದಾನದ ಬಗ್ಗೆ ಮಾತನಾಡಬೇಕು ಎಂದಿದ್ದಾರೆ.

ನಮ್ಮ ಸೇನೆ ಬಲಿಷ್ಠವಾಗಿದೆ. ಇಂತಹ ಸಮಯದಲ್ಲಿ ಮೌನವಾಗಿರುವುದು ಸರಿಯಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಇದೇ ವೇಳೆ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿ, ಆ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...