ಕೆಲ ದಿನಗಳ ಹಿಂದಷ್ಟೇ ಬಾಲಕನೊಬ್ಬ ಪಬ್ ಜಿ ಗೇಮ್ ಹುಚ್ಚಿಗೆ ಬಿದ್ದು ನೇಣಿಗೆ ಶರಣಾಗಿದ್ದ. ಇದೀಗ ಮೊಬೈಲ್ ಗೀಳಿಗೆ ಬಿದ್ದ ಮತ್ತೊಬ್ಬ ಬಾಲಕ ತನ್ನ ಪ್ರಾಣಕ್ಕೇ ಸಂಚಕಾರ ತಂದುಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 14 ವರ್ಷದ ಈ ಬಾಲಕ ಗೇಮ್ ಆಡುವ ಹವ್ಯಾಸಕ್ಕೆ ಅಂಟಿಕೊಂಡಿದ್ದು, ಅದರಲ್ಲಿ ನೀಡಿದ್ದ ಟಾಸ್ಕ್ ಗಳನ್ನು ಪೂರೈಸುತ್ತಿದ್ದ ಎನ್ನಲಾಗಿದೆ.
ಇದೇ ರೀತಿ ಗುರುವಾರದಂದು ಟಾಸ್ಕ್ ಪೂರ್ಣಗೊಳಿಸುವ ಸಲುವಾಗಿ ಅಂಗಡಿಯ ರೋಲಿಂಗ್ ಷಟರ್ ಎಳೆಯುವ ತಂತಿಯ ಕೊಂಡಿಯನ್ನು ಕುತ್ತಿಗೆಗೆ ಹಾಕಿಕೊಂಡು ತಿರುಗಿಸಲು ಮುಂದಾದ ವೇಳೆ ಕೊಂಡಿ ಸಿಲುಕಿಕೊಂಡ ಪರಿಣಾಮ ಸಾವಿಗೀಡಾಗಿದ್ದಾನೆ.