alex Certify ಮೊದಲ ಹಂತದಲ್ಲಿ ಯಾರೆಲ್ಲಾ ಪಡೆಯಲಿದ್ದಾರೆ ಕೊರೊನಾ ಲಸಿಕೆ…? ಇಲ್ಲಿದೆ ಸಂಪೂರ್ಣ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಹಂತದಲ್ಲಿ ಯಾರೆಲ್ಲಾ ಪಡೆಯಲಿದ್ದಾರೆ ಕೊರೊನಾ ಲಸಿಕೆ…? ಇಲ್ಲಿದೆ ಸಂಪೂರ್ಣ ಮಾಹಿತಿ

ಮಹಾಮಾರಿ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಗತ್ತಿನ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ದೇಶದಲ್ಲಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10-30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನರೇಂದ್ರ ಮೋದಿಯವರು ಚಾಲನೆ ನೀಡುತ್ತಿದ್ದು, ಮೊದಲ ದಿನವಾದ ಇಂದು ಮೂರು ಲಕ್ಷ ಮಂದಿಗೆ ಲಸಿಕೆ ಪಡೆಯುವ ನಿರೀಕ್ಷೆಯಿದೆ.

ಕರ್ನಾಟಕದ 243 ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯನ್ನು ಇಂದು ನೀಡಲಾಗುತ್ತಿದ್ದು, ಈಗಾಗಲೇ ಇದಕ್ಕಾಗಿ ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಸೇವಕರು ಈ ಲಸಿಕೆಯನ್ನು ಪಡೆಯುತ್ತಿದ್ದು, ಎರಡನೇ ಹಂತದಲ್ಲಿ ಪೊಲೀಸರು, ಕಂದಾಯ ಇಲಾಖೆ ನೌಕರರು ಮತ್ತು ವಾರಿಯರ್ ಗಳಿಗೆ ಲಸಿಕೆ ನೀಡಲಾಗುತ್ತದೆ. ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರು ಮತ್ತು ತೀವ್ರತರವಾದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತದೆ.

ಆದರೂ ಕೂಡ 18 ವರ್ಷ ಒಳಗಿನವರು, ಗರ್ಭಿಣಿಯರು, ಗರ್ಭಿಣಿಯಾಗಿರುವ ಅನುಮಾನವಿರುವವರು, ಬಾಣಂತಿಯರು, ಇಂಜೆಕ್ಷನ್ ಅಲರ್ಜಿ ಹೊಂದಿರುವವರಿಗೆ ಲಸಿಕೆ ನೀಡಬಾರದೆಂಬ ಸೂಚನೆ ನೀಡಲಾಗಿದೆ. ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಸಲುವಾಗಿ ಅಗತ್ಯ ಕ್ರಮಗಳನ್ನು ಸಹ ಕೈಗೊಳ್ಳಲಾಗಿದೆ.

ಮೊದಲ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಪಡೆಯಬೇಕಾಗಿದ್ದು, ಮೊದಲು ಯಾವ ಕಂಪನಿಯ ಲಸಿಕೆ ಪಡೆದಿರುತ್ತಾರೋ ಅದೇ ಕಂಪನಿಯ ಲಸಿಕೆಯನ್ನು ಎರಡನೇ ಸಂದರ್ಭದಲ್ಲೂ ಪಡೆಯಬೇಕಾಗುತ್ತದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎಂಬ ಎರಡು ಕಂಪನಿಯ ಲಸಿಕೆಗಳನ್ನು ಈಗ ನೀಡಲಾಗುತ್ತಿದ್ದು, ಇಂತಹುದೇ ಕಂಪನಿಯ ಲಸಿಕೆ ನಮಗೆ ಬೇಕೆಂದು ಕೇಳುವಂತಿಲ್ಲ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...