alex Certify ಮೊದಲ ಗಂಡನನ್ನು ತ್ಯಜಿಸಿ ಪ್ರಿಯಕರನನ್ನು ಮದುವೆಯಾದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಗಂಡನನ್ನು ತ್ಯಜಿಸಿ ಪ್ರಿಯಕರನನ್ನು ಮದುವೆಯಾದ ಯುವತಿ…!

ಯುವತಿಯೊಬ್ಬಳು ಮೊದಲನೇ ಗಂಡನನ್ನು ತ್ಯಜಿಸಿ, ಆತನಿಗೆ ವಿಚ್ಛೇದನವನ್ನೂ ನೀಡದೆ ಪ್ರಿಯಕರನನ್ನು ಮದುವೆಯಾದ ವಿಚಿತ್ರ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಹೌದು, 21 ವರ್ಷದ ಐಶ್ವರ್ಯ ಬಾಗಲಕೋಟೆಯ ನವನಗರದ ಆಕಾಶ್ ಸೊನ್ನ ಎಂಬಾತನೊಂದಿಗೆ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ.

ಐಶ್ವರ್ಯಗೆ ಬಾಲ್ಯ ವಿವಾಹ ಮಾಡಲಾಗಿತ್ತಂತೆ. ಬಳ್ಳಾರಿ ಮೂಲದ ಯುವಕನೊಂದಿಗೆ ಮದುವೆಯಾಗಿದ್ದ ಐಶ್ವರ್ಯಗೆ ಕುಟುಂಬದಲ್ಲಿ ಕಿರುಕುಳ ಇತ್ತು ಎಂದು ಹೇಳಿದ್ದಾರೆ. ಮದುವೆಯ ನಂತರವೂ ಪ್ರಿಯಕರನೊಂದಿಗೆ ಸಂಪರ್ಕದಲ್ಲಿದ್ದ ಈಕೆ ಇದೀಗ ಅವನ ಜೊತೆಯಲ್ಲೇ ಸಪ್ತಪದಿ ತುಳಿದಿದ್ದಾಳೆ. ತನ್ನ ಕುಟುಂಬಸ್ಥರಿಗೆ ತಾನು ಪ್ರೀತಿಸಿದ ಯುವಕನೊಂದಿಗೆ ಜೀವನ ನಡೆಸೋದಾಗಿ ಹೇಳಿದ್ದಾರೆ.

ಇತ್ತ ಕುಟುಂಬ ಬೆದರಿಕೆ ಹಾಕಬಹುದು ಎಂಬ ಕಾರಣಕ್ಕೆ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾರೆ. ಇತ್ತ ಐಶ್ವರ್ಯ ಮೊದಲ ಗಂಡನ ಜೊತೆ ವಿಚ್ಛೇದನ ಪಡೆದಿಲ್ಲ. ಹೀಗಾಗಿ ಈ ಪ್ರಕರಣ ಕಗ್ಗಂಟಾಗಿದೆ. ಇಂತಹದೊಂದು ವಿಚಿತ್ರ ಪ್ರಕರಣ ಪೊಲೀಸರ ಮುಂದಿದ್ದು ಇದನ್ನು ಯಾವ ರೀತಿ ಬಗೆಹರಿಸುತ್ತಾರೆಂದು ಕಾದು ನೋಡಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...