ಕಲಬುರ್ಗಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ ಕಲಬುರ್ಗಿಯಲ್ಲಿಯೇ ಆಗಿದ್ದು, ಹೀಗಾಗಿ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಸೋಂಕು ನಿಯಂತ್ರಣ ಈ ಜಿಲ್ಲೆಯಲ್ಲಿ ಆಗುತ್ತಿಲ್ಲ. ಮನೆಯಲ್ಲಿಯೇ ಔಷಧ ಸೇವಿಸಿ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಬರುತ್ತಿರುವುದು ಸೋಂಕಿತರ ಹೆಚ್ಚಳಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಈ ಬೆನ್ನಲ್ಲೇ ಇದೀಗ ಈ ಜಿಲ್ಲೆಯ 70 ಔಷಧ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆಯಂತೆ. ರಾಜ್ಯ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಸುಮಾರು 70 ಔಷಧಿ ಅಂಗಡಿಗಳ ಲೈಸೆನ್ಸ್‌ನ್ನು ಅನಿರ್ಧಿಷ್ಟಾವಧಿಗೆ ರದ್ದುಗೊಳಿಸಿ ಅಪರ ಔಷಧ ನಿಯಂತ್ರಕ ಅಮರೇಶ್ ತುಂಬಗಿ ಆದೇಶ ಹೊರಡಿಸಿದ್ದಾರೆ.
ಅನೇಕ ಮಂದಿ ಜ್ವರ, ಶೀತ, ಕೆಮ್ಮು ಸೇರಿದಂತೆ ಇತರ ರೋಗಗಳಿಗೆ ನೇರವಾಗಿ ಔಷಧ ಅಂಗಡಿಗಳಿಂದಲೇ ಔಷಧ ಪಡೆದಿದ್ದಾರೆ. ಇದರ ಜೊತೆಗೆ ಖರೀದಿದಾರರ ವಿವರವನ್ನು ಫಾರಂ ಪೋರ್ಟ್ ನಲ್ಲಿ ಭರ್ತಿ ಮಾಡದೆ ಅಂಗಡಿಗಳ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದಾರಂತೆ. ಹೀಗಾಗಿ ಕೋವಿಡ್-19 ರೆಗ್ಯುಲೇಷನ್ ಕಾಯ್ದೆಯ ಉಲ್ಲಂಘನೆಯಾಗಿದ್ದು, ಲೈಸೆನ್ಸ್ ರದ್ದು ಮಾಡಲಾಗಿದೆ.