ಬೆಂಗಳೂರು: ಯಲಚೇನಹಳ್ಳಿ ಹಾಗೂ ಅಂಜನಾಪುರ ಮಧ್ಯೆ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಇಂದಿನಿಂದ ಆರಂಭವಾಗಿದೆ.
ಈವರೆಗೆ ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಮಾತ್ರ ಮೆಟ್ರೋ ಸಂಚಾರವಿತ್ತು. ಇದೀಗ ಅಂಜನಾಪುರದವರೆಗೂ ಮೆಟ್ರೋ ಕಾಮಗಾರಿ ಮುಗಿದಿರುವುದರಿಂದ ಇಂದಿನಿಂದ 30 ದಿನಗಳ ಕಾಲ ಅಂಜನಾಪುರದವರೆಗೂ ಪರೀಕ್ಷಾರ್ಥ ಸಂಚಾರ ನಡೆಯಲಿದೆ.
ಈ ಮಾರ್ಗವಾಗಿ 2016ರಲ್ಲಿ ಆರಂಭವಾಗಿದ್ದ ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದು, ಈ ಹಿನ್ನಲೆಯಲ್ಲಿ ಯಲಚೇನಹಳ್ಳಿಯಿಂದ ಅಂಜನಾಪುರದವರೆಗೆ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ.