ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದು, ಮೃತ ವ್ಯಕ್ತಿಗಳ ಹೆಸರಲ್ಲಿ ಬೆಡ್ ಮುಂದುವರೆಸುತ್ತಿರುವ ಬಗ್ಗೆ ಮಾಹಿತಿಗಳು ಲಭಿಸಿವೆ. ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಹಲವು ಖಾಸಗಿ ಆಸ್ಪತ್ರೆಗಳು ಮೃತ ವ್ಯಕ್ತಿಗಳ ಹೆಸರಲ್ಲಿ ಹಾಗೂ ಡಿಸ್ಚಾರ್ಜ್ ಆಗಿರುವ ವ್ಯಕ್ತಿಗಳ ಹೆಸರಲ್ಲಿ ಬೆಡ್ ಮುಂದುವರೆಸಿವೆ ಎಂಬ ದೂರು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ನಾಳೆ ಅಂತಹ ಆಸ್ಪತ್ರೆಗಳ ಹೆಸರು ಬಹಿರಂಗಪಡಿಸುವುದಾಗಿ ತಿಳಿಸಿದರು.
ಸಿಗದ ಕೊರೊನಾ ವ್ಯಾಕ್ಸಿನ್; ಸ್ವಪಕ್ಷ ಸಂಸದರಿಂದಲೇ ಸಿಎಂ ವಿರುದ್ಧ ಆಕ್ರೋಶ
ಖಾಸಗಿ ಆಸ್ಪತ್ರೆಗಳು ಇನ್ನು ಎರಡು ದಿನಗಳ ಒಳಗಾಗಿ ಬೆಡ್ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಅಂತಹ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಿ ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿಯಿಂದ ಬಿಯು ನಂಬರ್ ನೀಡಿದರೂ ಸೋಂಕಿತರಿಗೆ ಬೆಡ್ ಖಾಲಿ ಇಲ್ಲ ಎಂದು ಹೇಳಿ ಹೊರಗೆ ಇರಿಸಲಾಗುವ ಪ್ರಕರಣಗಳು ಕೂಡ ಬೆಳಕಿಗೆ ಬಂದಿದೆ. ಇಂಥಹ ಆಸ್ಪತ್ರೆ ಹೆಸರನ್ನೂ ಬಹಿರಂಗ ಪಡಿಸಲಾಗುವುದು. ಒಟ್ಟಾರೆ ರಾಜ್ಯದಲ್ಲಿ ಉಂಟಾಗಿರುವ ಬೆಡ್ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು ಎಂದು ಹೇಳಿದರು.