ಬೆಂಗಳೂರು: ಮೂವರು ಮಕ್ಕಳಿಗೆ ನೇಣು ಬಿಗಿದ ತಂದೆ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಮೈಕೋ ಲೇಔಟ್ ನಲ್ಲಿ ನಡೆದಿದೆ.
ಇಬ್ಬರು ಹೆಣ್ಣು ಮಕ್ಕಳಾದ ಸರಸ್ವತಿ (14), ಹೇಮತಿ (9) ಹಾಗೂ ಮೂರು ವರ್ಷದ ಮಗ ರಾಜಕುಮಾರ್ ನಿಗೆ ನೇಣುಬಿಗಿದು ಸಾಯಿಸಿರುವ ತಂದೆ ಜನಕರಾಜ್ ಬಿಸ್ತಾ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಜನಕರಾಜ್ ಬಿಸ್ತಾ, ರಮಣಶ್ರೀ ಎನ್ ಕ್ಲೇವ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.