ಉಪ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಭಾಷಣ ಮಾಡುವ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರು ಆಡಿದ್ದ ಮಾತು ಈಗ ಸಂಕಷ್ಟ ತಂದೊಡ್ಡಿದೆ.
ಗೋಕಾಕ್ ನಲ್ಲಿ ಮಾತನಾಡುವ ವೇಳೆ ಯಡಿಯೂರಪ್ಪನವರು ವೀರಶೈವ, ಲಿಂಗಾಯತ ಮತಗಳನ್ನು ಬಿಜೆಪಿಗೆ ಹಾಕುವಂತೆ ಮನವಿ ಮಾಡಿದ್ದು, ಜಾತಿ ಹೆಸರಲ್ಲಿ ಮತ ಯಾಚಿಸಿದ ಕುರಿತಂತೆ ಅವರ ವಿರುದ್ಧ ದೂರು ದಾಖಲಾಗಿತ್ತು.
ಆದರೆ ಇದರ ವಿಚಾರಣೆ ನಡೆಸಿದ ಗೋಕಾಕ್ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದು, ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಇದೀಗ ಗೋಕಾಕ್ ನ ಜೆ.ಎಂ.ಎಫ್.ಸಿ. ನ್ಯಾಯಾಲಯ ಬಿ ರಿಪೋರ್ಟ್ ತಳ್ಳಿಹಾಕಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ನಿಗದಿ ಮಾಡಿ ಯಡಿಯೂರಪ್ಪನವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.