ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಯುವಕನೊಬ್ಬ ಮಿತಿ ಮೀರಿದ ವೇಗದಲ್ಲಿ ಬೈಕ್ ಚಲಾಯಿಸಿದ್ದಲ್ಲದೇ ಇತರೆ ವಾಹನ ಸವಾರರಿಗೂ ಕಂಟಕಪ್ರಾಯನಾಗಿ ಪರಿಣಮಿಸಿದ್ದ.
ತನ್ನ ಹೆಡ್ ಕ್ಯಾಮರಾದಿಂದ ತಾನು ವೇಗವಾಗಿ ಬೈಕ್ ಚಲಾಯಿಸುತ್ತಿದ್ದದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದ ಈ ಯುವಕ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿತ್ತು.
ಈ ವಿಚಾರ ಬೆಂಗಳೂರು ಟ್ರಾಫಿಕ್ ಪೊಲೀಸರ ಗಮನಕ್ಕೂ ಬಂದಿದ್ದು, ಇದೀಗ ಯುವಕನನ್ನು ಗುರುತಿಸಿ ಆತ ಚಲಾಯಿಸಿದ್ದ ಯಮಹಾ 1000 ಸಿಸಿ ಬೈಕನ್ನು ವಶಕ್ಕೆ ಪಡೆಯಲಾಗಿದೆ. ಈ ಯುವಕ ಹತ್ತಿರತ್ತಿರ 300 ಕಿ.ಮೀ. ವೇಗದಲ್ಲಿ ಬೈಕ್ ಚಲಾಯಿಸಿರುವುದು ವಿಡಿಯೋದಲ್ಲಿ ದಾಖಲಾಗಿತ್ತು.
https://www.facebook.com/BlrCityPolice/videos/711513829636036/