ಕೊರೊನಾ ಸೋಂಕಿನಿಂದ ಪಾರಾಗಲು ಇರುವ ಮಾರ್ಗಗಳಲ್ಲಿ ಮಾಸ್ಕ್ ಕೂಡ ಒಂದು. ಮಾಸ್ಕ್ ಹಾಕದೇ ಇದ್ದರೆ ದಂಡ ಹಾಕುತ್ತೇವೆಂದು ಸರ್ಕಾರವೇ ಹೇಳಿದೆ. ಆದರೆ ಈ ರೂಲ್ಸ್ ಜನಪ್ರತಿನಿಧಿಗಳಿಗೆ ಅನ್ವಯ ಆಗಲ್ಲ ಅನ್ನಿಸುತ್ತೆ. ಇದಕ್ಕೆ ಉದಾಹರಣೆ ಇವತ್ತು ವಿಧಾನಸೌಧದಲ್ಲಿ ನಡೆದ ಘಟನೆ.
ಹೌದು, ಸಂಸದ ಪ್ರತಾಪ್ ಸಿಂಹ ಇಂದು ಮಾಸ್ಕ್ ಧರಿಸದೇ ವಿಧಾನಸೌಧಕ್ಕೆ ಭೇಟಿ ನೀಡಿದ್ದಾರೆ. ಇದನ್ನು ಗಮನಿಸಿದ ವಿಧಾನಸೌಧದ ಪಶ್ಚಿಮ ಗೇಟ್ ಬಳಿ ಇದ್ದ ಆರೋಗ್ಯ ಅಧಿಕಾರಿಗಳು ಅವರನ್ನು ವಿಧಾನಸೌಧದ ಒಳಗೆ ಹೋಗಲು ಬಿಟ್ಟಿಲ್ಲ. ಮಾಸ್ಕ್ ಧರಿಸಿ ಬಂದರೆ ಮಾತ್ರ ವಿಧಾನಸೌಧಕ್ಕೆ ಎಂಟ್ರಿ ಎಂದು ಹೇಳಿದ್ದಾರೆ.
ಆದರೆ ಮಾಸ್ಕ್ ಇಲ್ಲದಿರೋ ಕಾರಣ ಅವರು ವಿಧಾನಸೌಧದಿಂದ ವಾಪಸ್ ಹೋಗಿದ್ದಾರೆ. ಜನಸಾಮಾನ್ಯರಿಗೇ ಅರಿವಿರುವ ವಿಚಾರ ಜನಪ್ರತಿನಿಧಿಗಳಾದ ಪ್ರತಾಪ್ ಸಿಂಹಗೆ ಗೊತ್ತಿಲ್ವಾ ಅಂತಾ ಜನ ಮಾತನಾಡುತ್ತಿದ್ದಾರೆ.