alex Certify ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಸಂಜನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಸಂಜನಾ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಸಂಜನಾ ಗಲ್ರಾಣಿ ಮತ್ತೆ ವಾಗ್ದಾಳಿ ನಡೆಸಿದ್ದು, ಸಂಬರ್ಗಿ ಒಬ್ಬ ಬೀದಿ ನಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಸಂಜನಾ, ಪ್ರಶಾಂತ್ ಸಂಬರಗಿ ನನ್ನ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿದ್ದಾನೆ. ನನ್ನನ್ನು ಚಿಯರ್ ಗರ್ಲ್ ಎಂದು ಹೇಳಿದ್ದಾನೆ. ಅವನನ್ನು ಹೊಡಿತೀನಿ. ನೀವೂ ಯಾರೂ ಆತನನ್ನು ಬಿಡಬೇಡಿ. ನಾನು ಸೆಲೆಬ್ರಿಟಿ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ. ನಾನು ನಟಿಯಾಗಿರುವುದೇ ತಪ್ಪಾ ಎಂದು ಗಳ ಗಳನೇ ಅತ್ತಿದ್ದಾರೆ.

ಪ್ರಚಾರಕ್ಕಾಗಿ ಸಂಬರಗಿ ನನ್ನ ಬಗ್ಗೆ ಹೇಳಿಕೆ ಕೊಟ್ಟಿದ್ದಾನೆ. ಆತ ಒಬ್ಬ ಬೀದಿ ನಾಯಿ. ಹೀಗಾಗಿ ಮೇಲಿರುವವರನ್ನೆಲ್ಲ ಬೀದಿಗೆ ಎಳೆಯುತ್ತಿದ್ದಾನೆ. ದಯವಿಟ್ಟು ನನ್ನ ಬಿಟ್ಟುಬಿಡಿ. ನಾನು ಶ್ರೀಲಂಕಾಗೆ ಪ್ರೋಗ್ರಾಮ್ ಗೆ ಹೋಗಿದ್ದು ಗೆಸ್ಟ್ ಆಗಿ. ಅಂದು ನನ್ನ ಅಪ್ಪ-ಅಮ್ಮ ಕೂಡ ನನ್ನ ಜತೆ ಬಂದಿದ್ದರು. ನನ್ನ ವಿರುದ್ಧದ ಅನಗತ್ಯ ಆರೋಪಗಳಿಂದಾಗಿ ನನ್ನ ಅಮ್ಮನಿಗೆ ಎದೆ ನೋವು ಬಂದಿದೆ. ರಾತ್ರಿಯಿಂದ ಎದೆ ನೋವಿಂದ ಬಳಲುತ್ತಿದ್ದಾರೆ. ಅಮ್ಮನಿಗೆ ಏನಾದರೂ ಆದರೆ ನಾನು ಸಂಬರಗಿಯನ್ನು ಸತ್ತರೂ ಬಿಡಲ್ಲ ಎಂದು ಸಂಜನಾ ಕಿಡಿಕಾರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...