ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು 7ನೇ ದಿನಕ್ಕೆ ಕಾಲಿಟ್ಟಿದ್ದು, ಸಾರಿಗೆ ಸಿಬ್ಬಂದಿಗಳು ಹಾಗೂ ಸರ್ಕಾರದ ನಡುವಿನ ಶೀತಲ ಸಮರ ತಾರಕಕ್ಕೇರಿದೆ. ಮುಷ್ಕರ ನಿರತ ಸಿಬ್ಬಂದಿಗಳ ವಿರುದ್ಧ ಸಿಎಂ ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಸಾರಿಗೆ ನೌಕರರೊಂದಿಗೆ ಮಾತುಕತೆಯ ಪ್ರಶ್ನೆಯೇ ಇಲ್ಲ, ಮುಷ್ಕರ ನಿರತ ಸಿಬ್ಬಂದಿಗಳ ಸಂಬಳ ನೀಡಲೂ ಸಾಧ್ಯವಿಲ್ಲ. ಒಂದು ತಿಂಗಳ ಕಾಲ ಪ್ರತಿಭಟನೆ ನಡೆಸಿದರೂ ಸರಿ 6ನೇ ವೇತನ ಆಯೋಗ ಜಾರಿ ಅಸಾಧ್ಯ ಎಂದು ಖಡಕ್ ಆಗಿ ಹೇಳಿದ್ದಾರೆ.
ಪ್ರಚಾರಕ್ಕೆ ನಿಷೇಧ ಹೇರಿದ ಚುನಾವಣಾ ಆಯೋಗದ ವಿರುದ್ಧ ದೀದೀ ಆಕ್ರೋಶ: ಗಾಂಧಿ ಪ್ರತಿಮೆ ಎದುರು ಏಕಾಂಗಿ ಧರಣಿ
ಸಾರಿಗೆ ನೌಕರರು ಯಾರದೋ ಮಾತು ಕೇಳಿ ಹಬ್ಬದ ಸಂದರ್ಭದಲ್ಲೂ ಮುಷ್ಕರ ಮಾಡುತ್ತಿದ್ದಾರೆ. ಸರ್ಕಾರದ ಯಾವುದೇ ಮನವಿಗೂ ಒಪ್ಪುತ್ತಿಲ್ಲ. ನೌಕರರ ಈ ಧೋರಣೆ ಸರಿಯಲ್ಲ. ಮುಷ್ಕರದಿಂದ ಇಲಾಖೆ ಜೊತೆಗೆ ಸಿಬ್ಬಂದಿಗಳಿಗೇ ನಷ್ಟ. ಒಂದು ತಿಂಗಳು ಪ್ರತಿಭಟನೆ ನಡೆಸಿದರೂ ಕೂಡ ಸರ್ಕಾರ ಮಾತ್ರ ಬಗ್ಗುವ ಪ್ರಶ್ನೆ ಇಲ್ಲ ಎಂದು ಹೇಳಿದರು.