ಬೆಂಗಳೂರು: ಶಾಸಕರ ಮನೆಗೆ ಬೆಂಕಿ ಹಾಗೂ 2 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೊನೆಗೂ ಮುಂದಾಗಿದ್ದಾರೆ.
ಸಂಪತ್ ರಾಜ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಸ್ತು ಪಾಲನಾ ಸಮಿತಿಗೆ ಡಿ.ಕೆ. ಶಿವಕುಮಾರ್ ಶಿಫಾರಸು ಮಾಡಿದ್ದಾರೆ.
ಗಲಭೆ ಪ್ರಕರಣ ಕುರಿತು ಶಾಸಕ ಅಖಂಡ ಶ್ರೀನಿವಾಸ್, ಸಂಪತ್ ರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಕೆಶಿಯವರಿಗೆ ಮನವಿ ಮಾಡಿದ್ದರು. ಕ್ರಮ ಕೈಗೊಳ್ಳದಿದ್ದರೆ ಹೈಕಮಾಂಡ್ ಮೊರೆ ಹೋಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ, ಸಂಪತ್ ರಾಜ್ ವಿರುದ್ಧ ತಡವಾಗಿಯಾದರೂ ಕ್ರಮಕ್ಕೆ ಮುಂದಾಗಿದ್ದಾರೆ.