alex Certify ಮಹಿಳೆ ಮೇಲೆ ದೌರ್ಜನ್ಯ: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವಿರುದ್ಧ ಎಫ್ಐಆರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಮೇಲೆ ದೌರ್ಜನ್ಯ: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವಿರುದ್ಧ ಎಫ್ಐಆರ್

ಬೆಂಗಳೂರು: ಮಹಿಳೆ ಮೇಲೆ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಧನರಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಪೇಟೆ ಕ್ಷೇತ್ರದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ನ ಕಾರ್ಪೊರೇಟರ್ ಆಗಿದ್ದ ಧನರಾಜ್, ಲಾಲ್ ಬಾಗ್ ರಸ್ತೆಯಲ್ಲಿದ್ದ ಕಲ್ಕತ್ ಟ್ಯೂಬ್ ಶಾಪ್ ನಲ್ಲಿ ಪೈಪ್ ಕೊಟೇಷನ್ ಕೇಳಿ ಕಡಿಮೆ ಬೆಲೆಗೆ ಕೊಡುವಂತೆ ಕಿರಿಕ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಈ ವೇಳೆ ಅಂಗಡಿ ಮಾಲೀಕ ಸಾವರ್ ಅಗರ್ವಾಲ್ ಹಾಗೂ ಧನರಾಜ್ ನಡುವೆ ವಾಗ್ವಾದ ನಡೆದಿದ್ದು, ಅಂಗಡಿಯ ಮಾಲೀಕನ ಸೊಸೆ ಪೂಜಾ ಮೇಲೆ ಧನರಾಜ್ ದೌರ್ಜನ್ಯವೆಸಗಿದ್ದರು. ಇದೇ ಪ್ರಕರಣ ಸಂಬಂಧ ಇದೀಗ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...