ರಾಜ್ಯದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವವ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಹೆಣ್ಣು ಮಕ್ಕಳೇ ಹೆಚ್ಚಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ನಡೆಸಿದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ.
ಕಲಬುರರ್ಗಿ, ಬೀದರ್ , ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ ಭಾಗದ ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಈ ಜಿಲ್ಲೆಗಳ ಗರ್ಭಿಣಿಯರಲ್ಲಿ ಕಬ್ಬಿಣದ ಅಂಶ ಕಡಿಮೆ ಇರೋದ್ರಿಂದ ಸರ್ಕಾರ ಪೊಲಿಕ್ ಆಸಿಡ್ ಮಾತ್ರೆಗಳನ್ನು ಉಚಿತವಾಗಿ ನೀಡುತ್ತಿದೆ. ಈ ಮಾತ್ರಗಳನ್ನು 100 ದಿನ ಸೇವಿಸಬೇಕು. ಆದರೆ ಶೇ.44 ಮಹಿಳೆಯರು ಮಾತ್ರ ಮಾತ್ರೆಗಳನ್ನು ಸೇವಿಸುತ್ತಿದ್ದು, ಉಳಿದವರು ಮಾತ್ರೆ ಸೇವಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಆ ಭಾಗದ ಮಹಿಳೆಯರಲ್ಲಿ ಅನಿಮಿಯಾ ಕಾಡುತ್ತಿದೆ.
ಇನ್ನು ಕಲ್ಯಾಣ ಕರ್ನಾಟಕದ ಒಂದಿಷ್ಟು ಜಿಲ್ಲೆಗಳು ಅಷ್ಟೆ ಅಲ್ಲದೆ ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರದಲ್ಲಿನ ಒಂದಿಷ್ಟು ಜನ ಗರ್ಭಿಣಿಯರೂ ರಕ್ತ ಹೀನತೆಯಿಂದ ಬಳಲುತ್ತಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಗರ್ಭಿಣಿಯರು ರಕ್ತ ಹೀನತೆಯಿಂದ ಬಳಲುತ್ತಿದ್ದರೆ ಅಪೌಷ್ಟಿಕ ಮಕ್ಕಳ ಜನನವಾಗುತ್ತದೆ ಇದು ದೇಶಕ್ಕೂ ಮಾರಕ ಎಂದು ಹೇಳಲಾಗುತ್ತಿದೆ.