ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ಕುತೂಹಲ, ಕ್ಷಣಕ್ಕೊಂದು ತಿರುವುಗಳ ಮೂಲಕ ಇದೀಗ ಅಂತಿಮ ಹಂತದತ್ತ ಸಾಗಿದ್ದು, ಇಡೀ ಪ್ರಕರಣದ ಕುರಿತಾಗಿ ರಮೇಶ್ ಜಾರಕಿಹೊಳಿ ಮಹತ್ವದ ಸುದ್ದಿಗೋಷ್ಠಿ ನಡೆಸಿದರು.
ನಮ್ಮ ಬಳಿ 11 ಸಾಕ್ಷಾಧಾರಗಳಿವೆ. ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್. ನಾನು ಗಂಡಸು. ಆತ ಗಂಡಸಲ್ಲ. ಮಹಾನಾಯಕ ತಪ್ಪು ಮಾಡಿದರೆ ಆತನನ್ನು ಒಳಗೆ ಹಾಕಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿಯನ್ನು ಒದ್ದು ಒಳಗೆ ಹಾಕಿ: ಸ್ಪೋಟಕ ಹೇಳಿಕೆ ನೀಡಿ ಏಕವಚನದಲ್ಲೇ ರಮೇಶ್ ಜಾರಕಿಹೊಳಿ ಆಕ್ರೋಶ
ನಮ್ಮ ಕುಟುಂಬ ಯಾವುದೇ ಹೆಣ್ಣುಮಕ್ಕಳನ್ನು ಅಗೌರವದಿಂದ ಕಂಡಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದ್ದರೆ ನನ್ನನ್ನು ಒದ್ದು ಒಳಗೆ ಹಾಕಲಿ. ಮಹಾನಾಯಕ ಯಾರೆಂದು ಯುವತಿಯ ಪೋಷಕರೇ ಬಹಿರಂಗ ಮಾಡಿದ್ದಾರೆ. ಯುವತಿ ಪೋಷಕರಿಗೆ ಧನ್ಯವಾದ ಹೇಳುತ್ತೇನೆ. ನಾನು ಡಿ.ಕೆ. ಶಿವಕುಮಾರ್ ವಿರುದ್ಧ ನೇರವಾಗಿ ದೂರು ದಾಖಲಿಸುತ್ತೇನೆ. ಯುವತಿ ಧೈರ್ಯವಾಗಿ ಹೊರಬಂದು ದೂರು ದಾಖಲಿಸಲಿ ಎಂದು ಹೇಳಿದ್ದಾರೆ.