ಈ ತಿಂಗಳ ಆರಂಭದಿಂದಲೇ ರಾಜ್ಯದಲ್ಲಿ ಒಂದಿಷ್ಟು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ಕೃಷಿ ಚಟುವಟಿಕೆಗಳು ಕೂಡ ಆರಂಭಗೊಂಡಿವೆ. ಮಳೆಯಿಂದಾಗಿ ಒಂದಿಷ್ಟು ಮಂದಿ ಖುಷಿಯಾಗಿದ್ದರೆ, ಮತ್ತೊಂದಿಷ್ಟು ಕಡೆಗಳಲ್ಲಿ ನೆರೆಯ ಭೀತಿ ಎದುರಾಗುತ್ತಿದೆ.
ಹೌದು, ಉಡುಪಿ, ಕೊಡಗು ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನದಿಗಳ ಮಟ್ಟ ಹೆಚ್ಚಾಗುತ್ತಲೇ ಇದೆ. ಇದರ ಜೊತೆಗೆ ಈಗಾಗಲೇ ಕೆಲ ಮನೆಗಳು ಕುಸಿದಿವೆ. ಕೆಲವು ಕಡೆಗಳಲ್ಲಿ ಶಾಲೆಗಳಿಗೆ ಹಾನಿಯಾಗಿವೆ. ಇನ್ನು ಕರಾವಳಿ ಭಾಗದಲ್ಲಿ ನೆರೆಯ ಭೀತಿಯೂ ಎದುರಾಗಿದೆ.
ಅಘನಾಶಿನಿ, ಗಂಗಾವಳಿ, ನೇತ್ರಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ನದಿ ಅಂಚಿನ ಮನೆಗಳನ್ನು ಶಿಫ್ಟ್ ಮಾಡಲು ಚಿಂತನೆ ನಡೆಯುತ್ತಿದೆ. ಇನ್ನು ದಕ್ಷಿಣ ಕನ್ನಡ, ಮಂಗಳೂರು, ಬೆಳ್ತಂಗಡಿ, ಉಡುಪಿ, ಕುಮಟ, ಕಾರವಾರ, ಶಿರಸಿ, ಸಾಗರ ಹಾಗೂ ಶಿವಮೊಗ್ಗ ಭಾಗಗಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ.