alex Certify ಮಲೆಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿಯಂದು ಭಕ್ತರಿಗಿಲ್ಲ ಪ್ರವೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲೆಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿಯಂದು ಭಕ್ತರಿಗಿಲ್ಲ ಪ್ರವೇಶ

ಚಾಮರಾಜನಗರ: ಕೊರೊನಾ ಕಾರಣದಿಂದಾಗಿ ಈ ಬಾರಿ ಸರಳ ಶಿವರಾತ್ರಿ ಆಚರಣೆಗೆ ಸಿದ್ಧತೆ ನಡೆಸಲಾಗಿದ್ದು, ಮಲೆ ಮಹದೇಶ್ವರ ಬೆಟ್ಟಕ್ಕೆ ಇಂದಿನಿಂದ 5 ದಿನಗಳ ಕಾಲ ಭಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಶಿವರಾತ್ರಿಯಂದು ನಡೆಯುವ ರಥೋತ್ಸವಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದರು. ಆದರೆ ಬೆಟ್ಟದ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸ್ಥಳೀಯ ಭಕ್ತರಿಗಷ್ಟೇ ಜಾತ್ರೆ ಸೀಮಿತವಾಗಿದೆ. ಇದರಿಂದಾಗಿ ಮಾದಪ್ಪನ ಭಕ್ತರು ನಿರಾಶರಾಗಿದ್ದಾರೆ.

ವಾಹನ ಸವಾರರಿಗೆ ಮಾತ್ರವಲ್ಲ, ಮಾರಾಟಗಾರರಿಗೂ ಬಿಗ್ ಶಾಕ್

ಹೊರಗಿನಿಂದ ಬರುವ ಭಕ್ತರನ್ನು ಪೊಲೀಸರು ಕೌದಳ್ಳಿ ಬಳಿಯೇ ತಡೆದು ನಿಲ್ಲಿಸುತ್ತಿದ್ದು, ಕೊರೊನಾ ಭೀತಿಯಿಂದಾಗಿ ಜಿಲ್ಲಾಡಳಿತ ಮಾದಪ್ಪನ ದರ್ಶನಕ್ಕೆ ಕಠಿಣ ಕ್ರಮ ಕೈಗೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...