ಚಿಕ್ಕಮಕ್ಕಳನ್ನು ಹೇಗೆ ನೋಡಿಕೊಂಡರು ಅವರುಗಳು ಒಂದಲ್ಲ ಒಂದು ಕಿತಾಪತಿ ಮಾಡುತ್ತಿರುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರೂ ಯಾವುದೋ ಒಂದು ಬಗೆಯಲ್ಲಿ ಬಾಯಿಗೆ ಏನಾದರೂ ವಸ್ತುಗಳನ್ನು ಹಾಕಿಕೊಳ್ಳುವುದು ಇಲ್ಲವೇ ತಲೆಗೆ ಏನಾದರೂ ಪೆಟ್ಟು ಮಾಡಿಕೊಳ್ಳುವುದು ಮಾಡುತ್ತಿರುತ್ತಾರೆ.
ಮಕ್ಕಳಿಗೆ 3 ವರ್ಷವಾಗುತ್ತಿದ್ದಂತೆ ತರಲೆ, ತುಂಟಾಟಗಳು ಹೆಚ್ಚಾಗುತ್ತದೆ. ಅವರನ್ನು ಸಂಭಾಳಿಸುವುದಕ್ಕೆ ಒಬ್ಬರು ಬೇಕಾಗುತ್ತದೆ. ಈ ವಯಸ್ಸಿನಲ್ಲಿ ನಿದ್ರೆಗಿಂತ ಹೆಚ್ಚಾಗಿ ಅವರುಗಳು ತುಂಟಾಟ ಮಾಡುತ್ತಾರೆ.
ಮನೆಯಲ್ಲಿ ಮಗುವಿದ್ರೆ ಯಾವುದೇ ಕಾರಣಕ್ಕೂ ನಾಣ್ಯ, ಪಿನ್, ಬಟನ್ ಗಳನ್ನು ಕೆಳಗಡೆ ಇಡಬೇಡಿ. ಎಷ್ಟೋ ಮಕ್ಕಳು ಇವುಗಳನ್ನು ಬಾಯಿಗೆ ಹಾಕಿಕೊಂಡು ಜೀವಕ್ಕೆ ಕುತ್ತು ತಂದುಕೊಂಡ ಘಟನ ಇದೆ. ಎಲ್ಲವನ್ನೂ ಒಂದು ಡಬ್ಬಿಗೆ ಹಾಕಿ ಆದಷ್ಟು ಮೇಲೆ ಇಡಿ.
ಇನ್ನು ಕೋಣೆಯ ಬಾಗಿಲುಗಳ ಚಿಲಕವನ್ನು ಆದಷ್ಟು ಕಳಚಿ ಇಡಿ. ಅವರು ಆಡುವ ಗೋಜಿನಲ್ಲಿ ಯಾವುದೋ ರೀತಿಯಲ್ಲಿ ಚಿಲಕ ಹಾಕಿಕೊಳ್ಳುತ್ತಾರೆ. ಇದರಿಂದ ಮನೆಯ ಬಾಗಿಲು ಒಡೆಯುವ ಪರಿಸ್ಥಿತಿ ಬರಬಹುದು.
ಇನ್ನು ಆದಷ್ಟು ಗಾಜಿನ ವಸ್ತುಗಳನ್ನು ಮಕ್ಕಳಿಗೆ ಎಟುಕದ ರೀತಿ ಮೇಲೆ ಇಡಿ. ಹಾಗೇ ಗ್ಯಾಸ್ ಸ್ಟವ್ ಲೈಟರ್, ಬೆಂಕಿಪೊಟ್ಟಣ ಇವುಗಳನ್ನು ಮಕ್ಕಳಿಂದ ದೂರವಿಟ್ಟರೆ ತುಂಬಾ ಒಳ್ಳೆಯದು.