![](https://kannadadunia.com/wp-content/uploads/2020/09/a7eab397-f9cd-4f00-8388-bce8abced40c.jpg)
ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಪರಪ್ಪನ ಅಗ್ರಹಾರ ಪಾಲಾಗಿದ್ದಾರೆ. ರಾಗಿಣಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದ್ದು, ಅಲ್ಲಿಯವರೆಗೆ ಜೈಲುವಾಸ ಮುಂದುವರೆಯುವ ಸಾಧ್ಯತೆ ಇದೆ.
ಇದರ ಮಧ್ಯೆ ಪ್ರಸಕ್ತ ನಡೆಯುತ್ತಿರುವ ಬೆಳವಣಿಗೆಗಳಿಂದ ಮನನೊಂದಿರುವ ನಟಿ ರಾಗಿಣಿ ಅವರ ತಂದೆ ರಾಕೇಶ್ ದ್ವಿವೇದಿ, ತಮ್ಮ ಫ್ಲ್ಯಾಟನ್ನು ಮಾರಾಟಕ್ಕಿಟ್ಟಿದ್ದಾರೆಂದು ಹೇಳಲಾಗಿದೆ.
3 ಬೆಡ್ರೂಮ್ ಹೊಂದಿರುವ ಈ ಫ್ಲಾಟ್ ಗೆ ಎರಡು ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ. ರಾಗಿಣಿ ಅವರ ತಂದೆ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಈಗ ತಮ್ಮ ಪುತ್ರಿ ಪ್ರಕರಣದಿಂದ ಮನ ನೊಂದಿದ್ದಾರೆ ಎನ್ನಲಾಗಿದೆ.