ವಿಶ್ವದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ವ್ಯಾಪಕವಾಗುತ್ತಿದೆ. ಹೀಗಾಗಿಯೇ ಭಾರತದಲ್ಲಿ ಶಾಲಾ – ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಇತರೆ ಆರ್ಥಿಕ ಚಟುವಟಿಕೆಗಳು ಆರಂಭವಾಗಿದ್ದರೂ ಸಹ ಮಂದಗತಿಯಲ್ಲಿ ಸಾಗಿದೆ.
ಕರ್ನಾಟಕದಲ್ಲೂ ಸಹ ಕೊರೊನಾ ಆರ್ಭಟ ಜೋರಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಇದೆ. ಇದರ ಮಧ್ಯೆ ಕೊರೊನಾ ಸಾವಿನ ಕುರಿತು ತಜ್ಞರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.
ಮಧುಮೇಹ ಇರುವವರು, ಅಧಿಕ ರಕ್ತದೊತ್ತಡದಿಂದ ಬಳಲುವವರು ಹಾಗೂ ಬೊಜ್ಜು ಹೊಂದಿದವರಿಗೆ ಕೊರೊನಾ ಹೆಚ್ಚು ಸಂಚಕಾರಿ ಎಂದು ಹೇಳಲಾಗಿದೆ. ಅದರಲ್ಲೂ ಮಧುಮೇಹದಲ್ಲಿ ನಿಯಂತ್ರಣ ಹೊಂದಿಲ್ಲದ ವರಿಗೆ ಕೊರೊನಾ ತೀವ್ರವಾಗಿ ಬಾಧಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ.