ಮೈಸೂರು: ಹೆಲಿಟೂರಿಸಂಗಾಗಿ ಮರಗಳನ್ನು ಕಡಿಯುತ್ತಿರುವ ಬಗ್ಗೆ ಸಾರ್ವಜನಿಕರು, ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಮರ ಕಡಿಯಲು ಸಾರ್ವಜನಿಕ ಆಕ್ಷೇಪಣಾ ಅರ್ಜಿಗಳನ್ನು ಕೂಡ ಆಹ್ವಾನಿಸಲಾಗಿದೆ. ಈ ಬೆಳವಣಿಗೆ ನಡುವೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅರಣ್ಯ ಇಲಾಖೆಗೆ ಪತ್ರ ಒಂದನ್ನು ಬರೆದಿದ್ದಾರೆ.
ಜಿಲ್ಲೆಯಲ್ಲಿ ಹೆಲಿಟೂರಿಸಂಗಾಗಿ ಮರಗಳನ್ನು ಕಡಿಯಲು ಗುರುತು ಮಾಡಿರುವ ಜಾಗ ರಾಜಮನೆತನಕ್ಕೆ ಸೇರಿದ್ದು ಎಂದು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.
ರೆಡ್ ಅಲರ್ಟ್: ಕೈಮೀರಿದ ಕೊರೋನಾ ಬಗ್ಗೆ ಆಘಾತಕಾರಿ ಮಾಹಿತಿ ನೀಡಿದ ಸುಧಾಕರ್ –ಕಠಿಣ ನಿಯಮ ಜಾರಿ ಅನಿವಾರ್ಯ
ಮರಗಳನ್ನು ಕಡಿಯಲು ಗುರುತು ಹಾಕಿರುವ ಜಾಗ ನಮ್ಮದು. ಈ ಬಗ್ಗೆ ಹೈಕೋರ್ಟ್ ನಲ್ಲಿ ಕೂಡ ನಮ್ಮ ಪರವಾಗಿ ತೀರ್ಪು ಬಂದಿದೆ. ಹೀಗಿರುವಾಗ ಮರ ಕಡಿಯಲು ಸಾರ್ವಜನಿಕ ಆಕ್ಷೇಪಣಾ ಅರ್ಜಿ ಕರೆದಿರುವುದು ಕಾನೂನು ಬಾಹಿರ. ಹಾಗೂ ಅತಿಕ್ರಮ ಪ್ರವೇಶವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ಷೇಪಣ ಅರ್ಜಿ ಪ್ರಕ್ರಿಯೆ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಇಲ್ಲವಾದಲ್ಲಿ ನಮ್ಮ ಜಾಗದಲ್ಲಿನ ಮರಗಳನ್ನು ಉಳಿಸಿಕೊಳ್ಳಲು ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.