ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಈಗಾಗಲೇ ರಾಜ್ಯಸಭಾ ಚುನಾವಣೆಗೆ ಸಿದ್ದತೆಗಳು ನಡೆಯುತ್ತಿದ್ದು, ಮೂರು ಪಕ್ಷಗಳಲ್ಲಿ ಕೂಡ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಇದರ ಜೊತೆಗೆ ಮತ್ತೆ ಜೆಡಿಎಸ್ – ಬಿಜೆಪಿ ಮೈತ್ರಿ ಬಗ್ಗೆ ಮಾತುಗಳು ಓಡಾಡುತ್ತಿವೆ.
ಹೌದು, ಇದಕ್ಕೆ ಪುಷ್ಟಿ ನೀಡುವಂತೆ ರಾಮನಗರದಲ್ಲಿ ಸಚಿವ ಆರ್. ಅಶೋಕ್ ಹೇಳಿಕೆಯೊಂದನ್ನು ನೀಡಿದ್ದಾರೆ. ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿರುವ ಅಶೋಕ್, ಬ್ರಿಟಿಷರ ಸಂಸ್ಥೆ ಕಾಂಗ್ರೆಸ್. ಇದರ ಮೊದಲ ಅಧ್ಯಕ್ಷರು ಬ್ರಿಟಿಷರೇ ಆಗಿದ್ದರು ಎಂದಿದ್ದಾರೆ.
ಇನ್ನು ಜೆಡಿಎಸ್ಗೆ ಕಾಂಗ್ರೆಸ್ ಮೋಸ ಮಾಡಿದೆ. ಅವರ ಮೋಸದ ಜಾಲ ಇವಾಗ ಜೆಡಿಎಸ್ಗೆ ಅರ್ಥವಾಗಿದೆ. ಈ ಹಿಂದೆ ನಾವು ಒಮ್ಮೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಅಭಿವೃದ್ಧಿಗೆ ಸಹಕಾರ ನೀಡಿದರೆ ಮತ್ತೆ ಮೈತ್ರಿ ನೋಡೋಣ ಎಂದು ಹೇಳುವ ಮೂಲಕ ಮೈತ್ರಿ ಬಗ್ಗೆ ಸುಳಿವು ನೀಡಿದ್ದಾರೆ ಅಶೋಕ್.