
ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣದಲ್ಲಿ ಸಂಜನಾ ಫ್ರೆಂಡ್ಸ್ ವಿರುದ್ಧ ಆರೋಪ ಕೇಳಿಬಂದಿದ್ದರಿಂದ ಸಂಜನಾಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ನನ್ನ ಮಗಳ ವಿರುದ್ಧ ಕೇಳಿ ಬಂದಿರುವ ಆರೋಪಗಳು ಸುಳ್ಳು ಎಂದು ನಟಿ ಸಂಜನಾ ತಾಯಿ ರೇಷ್ಮಾ ಹೇಳಿದ್ದಾರೆ.
ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣದಲ್ಲಿ ಇದೀಗ ಸಿಸಿಬಿ ಪೊಲೀಸರು ಮೂರು ಗಂಟೆ ವಿಚಾರಣೆ ಬಳಿಕ ನಟಿ ಸಂಜನಾ ಅವರನ್ನು ಬಂಧಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಸಂಜನಾ ತಾಯಿ, ಪ್ರಕರಣದಲ್ಲಿ ಸಂಜನಾ ಅವರ ಸ್ನೇಹಿತರ ಹೆಸರು ಕೇಳಿ ಬಂದಿದ್ದರಿಂದ ಪೊಲೀಸರು ಸಂಜನಾಳನ್ನು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ನಡೆಯಲಿ. ದೇವರ ದಯೆಯಿಂದ ಏನೂ ಸಮಸ್ಯೆಗಳಾಗಲ್ಲ ಎಂದರು.
ನನ್ನ ಮಗಳ ವಿರುದ್ಧ ಬಂದಿರುವ ಎಲ್ಲಾ ಆರೋಪ ಸುಳ್ಳು. ಪೊಲೀಸರು ತನಿಖೆ ನಡೆಸಲಿ. ಎಲ್ಲದಕ್ಕೂ ಸಮಯ ಬರುತ್ತದೆ, ಎಲ್ಲವನ್ನೂ ಹೇಳಲು ಕೂಡ ಸಮಯ ಬರುತ್ತದೆ. ಆರೋಪಗಳಿಂದ ಮುಕ್ತಳಾಗಿ ಸಂಜನಾ ಹೊರ ಬರಲಿದ್ದಾಳೆ ಎಂದು ತಿಳಿಸಿದ್ದಾರೆ.
ಇನ್ನು ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣ ಸಂಬಂಧ ಇಂದು ನಟಿ ಸಂಜನಾ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಸಂಜನಾರನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.