ಕೊರೊನಾ ಕಾರಣದಿಂದ ಮಕ್ಕಳು ಮನೆಯಲ್ಲಿಯೇ ಇದ್ದಾರೆ. ಶಾಲೆಗೆ ಹೋದರೆ ಎಷ್ಟೋ ವಾಸಿ ಇವರನ್ನು ಮನೆಯಲ್ಲಿ ಹಾಕಿಕೊಳ್ಳುವುದೇ ದೊಡ್ಡ ಕಷ್ಟದ ಕೆಲಸ ಎಂದು ನೀವೆಂದುಕೊಳ್ಳುತ್ತಿದ್ದೀರಾ…? ಹಾಗಾದ್ರೆ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ.
ನಾವು ಹೇಳಿದ್ದನ್ನು ಮಕ್ಕಳು ಕೂಡಲೇ ಪಾಲಿಸಬೇಕು ಎಂಬ ಮನಸ್ಥಿತಿಯನ್ನು ತಲೆಯಿಂದ ತೆಗೆದುಹಾಕಿ. ಅವರಿಗೂ ಕೂಡ ಗೆಳೆಯರ ಸಂಗವಿಲ್ಲದೇ ಬೇಸರವಾಗಿರುತ್ತದೆ. ಹಾಗಾಗಿ ಆದಷ್ಟು ಪ್ರೀತಿಯಿಂದ ಅವರ ಮನವನ್ನು ಒಲಿಸಿಕೊಳ್ಳುವುದನ್ನು ಕಲಿಯಿರಿ.
ಮಕ್ಕಳು ದಿನಾ ಒಂದೇ ರೀತಿ ಇರುವುದಿಲ್ಲ. ನಮ್ಮ ಮೂಡ್ ಬದಲಾದ ಹಾಗೇ ಮಕ್ಕಳ ಮೂಡ್ ಕೂಡ ಬದಲಾಗುತ್ತಿರುತ್ತದೆ. ಹಾಗಾಗಿ ಅವರ ಭಾವನೆಗಳಿಗೂ ಬೆಲೆ ಕೊಡುವುದನ್ನು ಕಲಿಯಿರಿ.
ಹಲ್ಲು ಹುಳುಕು ಹಿಡಿಯುವುದನ್ನು ತಡೆಯಲು ಹೀಗೆ ಮಾಡಿ
ಮಗು ತರಕಾರಿ ತಿನ್ನಲ್ಲ, ಹಣ್ಣು ತಿನ್ನಲ್ಲ ಎಂದು ಹೊಡೆದು, ಬಡಿದು ತಿನ್ನಿಸುವ ಬದಲು ಕ್ಯಾರೆಟ್ ದೋಸೆ, ಮಿಲ್ಕ್ ಶೇಕ್ ಮಾಡಿಕೊಡಿ. ಇದು ಅವರಿಗೂ ಇಷ್ಟವಾಗುತ್ತದೆ. ತರಕಾರಿಯೂ ಹೊಟ್ಟೆಗೆ ಸೇರುತ್ತದೆ.
ಮೊದಲು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ. ಅವರ ಮೇಲೆ ನಿಮ್ಮ ನಿರ್ಧಾರ ಹೇರುವುದಕ್ಕೆ ಹೋಗಬೇಡಿ. ಅವರ ಬಾಲ್ಯವನ್ನು ಸ್ವಚ್ಛಂದವಾಗಿ ಅನುಭವಿಸುವುದಕ್ಕೆ ಬಿಡಿ.