
ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಮುಸ್ಲಿಂ ಆರೋಪಿಗಳ ಹೆಸರನ್ನು ಮಾತ್ರ ಓದಿ ಹೇಳಿದ್ದಾರೆ. ಉಳಿದ ಆರೋಪಿಗಳ ಹೆಸರನ್ನು ಪ್ರಸ್ತಾಪಿಸಿಲ್ಲ. ಈ ಮೂಲಕ ಕೋಮು ಬಣ್ಣ ಲೇಪಿಸುವ ಬಿಜೆಪಿ ಕುತಂತ್ರ ಬಯಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಚಿತೆಯಲ್ಲಿ ಚಳಿ ಕಾಯಿಸುವ ನೀಚತನ ಇರುವುದು ಬಿಜೆಪಿಗೆ ಮಾತ್ರ. ಕಳೆದ ಭಾರಿ ಬೆಡ್ ಖರೀದಿ ಹಗರಣ, ಈ ಭಾರಿ ಬೆಡ್ ಬ್ಲಾಕಿಂಗ್ ಹಗರಣ. ಹಗರಣ ಮಾಡಿದ ತೋಳಗಳೇ ಮೊಲಗಳಂತೆ ಮುಖವಾಡ ಧರಿಸಿ ಹಗರಣ ಬಯಲಿಗೆಳೆಯುವ ಮಹಾನಾಟಕ ಮಾಡಿದ್ದವು…! ತಮ್ಮ ಭ್ರಷ್ಟಾಚಾರ ಮರೆಮಾಚಲು ಕೋಮು ಬಣ್ಣ ಲೇಪಿಸಲು ಯತ್ನಿಸಿದ ಕುತಂತ್ರ ಬೆತ್ತಲಾಗಿದೆ ಎಂದು ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಕಳೆದ ಭಾರಿ ಹಾಸಿಗೆ ಖರೀದಿ ಹಗರಣ, ನಂತರ ಹಾಸಿಗೆ ಮೇಲಿನ ಹಗರಣ, ಈಗ ಹಾಸಿಗೆ ಹಂಚಿಕೆಯ ಹಗರಣ ಈ ಲಂಚ – ಮಂಚದ ಸರ್ಕಾರಕ್ಕೂ ಹಾಸಿಗೆಗೂ ಭಾರಿ ನಂಟು ! ಸಂಕಟದ ನಡುವೆಯೂ ಹಾಸಿಗೆ ಹೆಸರಲ್ಲಿ ಹೇಸಿಗೆ ನಡೆಸಿದ ಬಿಜೆಪಿ ಶಾಸಕ, ಸಂಸದರನ್ನು ಮೊದಲು ಬಂಧಿಸಬೇಕು ಎಂದು ಆಗ್ರಹಿಸಿದೆ.