ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮುಧೋಳ ತಳಿಯ ನಾಯಿಗಳು ಈಗ ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗುವ ಮೂಲಕ ದೇಶಾದ್ಯಂತ ಹೆಸರುವಾಸಿಯಾಗಿವೆ.
ಉತ್ತರ ಪ್ರದೇಶದ ಆಗ್ರಾದ ಏರ್ ಫೋರ್ಸ್ ಕೇಂದ್ರದಿಂದ ಜಿಲ್ಲೆಯ ಮುಧೋಳ ಶ್ವಾನ ಸಂವರ್ಧನೆ ಕೇಂದ್ರಕ್ಕೆ 6 ನಾಯಿಗಳಿಗೆ ಬೇಡಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ನಾಲ್ಕು ನಾಯಿ ಮರಿಗಳನ್ನು ಅಧಿಕೃತವಾಗಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಉಳಿದ ಎರಡು ನಾಯಿ ಮರಿಗಳನ್ನು ಮುಂದಿನ ವರ್ಷ ನೀಡಲಾಗುತ್ತಿದೆ.
ಈಗಗಾಲೇ ಭೂಸೇನೆ ಹಾಗೂ ಸಿ ಆರ್ ಪಿ ಎಫ್ ನಲ್ಲಿ ಮುಧೋಳ ನಾಯಿಗಳನ್ನು ಬಳಕೆ ಮಾಡಲಾಗುತ್ತಿದೆ. ಸೇನೆಯಲ್ಲಿ ಮುಧೋಳ ಶ್ವಾನದ ಕಾರ್ಯಕ್ಷಮತೆಯನ್ನು ಮನಗಂಡ ಭಾರತೀಯ ವಾಯುಸೇನೆ ಕೂಡ ಇದೀಗ ನಾಲ್ಕು ಮರಿಗಳನ್ನು ಪಡೆದುಕೊಂಡಿದೆ. ಇವುಗಳಿಗೆ ಮುಂದಿನ ಒಂದು ವರ್ಷಗಳ ಕಾಲ ತರಬೇತಿಯನ್ನು ನೀಡಲಾಗುತ್ತಿದೆ.