ಸ್ಯಾಂಡಲ್ ವುಡ್ ನಟಿ ತುಪ್ಪದ ಬೆಡಗಿ ರಾಗಿಣಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆದೊಯ್ದಿದ್ದಾರೆ. ತಂದೆ-ತಾಯಿ ಜೊತೆ ರಾಗಿಣಿಯನ್ನು ಸಿಸಿಬಿ ಕಚೇರಿಗೆ ಕರೆದೊಯ್ಯಲಾಗಿದೆ. ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ.
ಸಿಸಿಬಿ ಅಧಿಕಾರಿಗಳು ಮನೆಗೆ ಬಂದಾಗ್ಲೇ ಮನೆ ಬಳಿ ಇದ್ದ ಮಾಧ್ಯಮಗಳಿಗೆ ಕೈ ಬೀಸಿದ್ದ ರಾಗಿಣಿ, ಎಲ್ಲ ಚೆನ್ನಾಗಿದೆ ಎನ್ನುವ ಪ್ರಯತ್ನ ಮಾಡಿದ್ದರು. ಸಿಸಿಬಿ ಅಧಿಕಾರಿಗಳ ಜೊತೆ ಮನೆಯಿಂದ ಹೊರ ಬರ್ತಿದ್ದ ರಾಗಿಣಿ ಮಾಧ್ಯಮಗಳ ಮುಂದೆ ಮತ್ತೆ ಕೈ ಬೀಸಿದ್ದರು. ಆದ್ರೆ ಸಿಸಿಬಿ ಅಧಿಕಾರಿಗಳು ರಾಗಿಣಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಹಾಗಾಗಿ ರಾಗಿಣಿ ಕಾರ್ ಏರಬೇಕಾಯ್ತು.
ಅನೇಕ ಮಾಧ್ಯಮಗಳು ರಾಗಿಣಿಯಿದ್ದ ಸಿಸಿಬಿ ಕಾರನ್ನು ಫಾಲೋ ಮಾಡಿವೆ. ಈ ವೇಳೆ ರಾಗಿಣಿ ಅಲ್ಲಿಯೂ ನಾನು ಹೆದರುತ್ತಿಲ್ಲ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ಟ್ರಾಫಿಕ್ ನಲ್ಲಿ ಕಾರ್ ನಿಂತಿದ್ದಾಗ ಅಕ್ಕ-ಪಕ್ಕ ಇದ್ದ ಬೇರೆ ಪ್ರಯಾಣಿಕರ ಜೊತೆ ಅವ್ರು ಕೈ ಬೀಸಿ ಮಾತನಾಡಿದ್ದಾರೆ. ಕಾರ್ ನಲ್ಲಿದ್ದವರ ಜೊತೆಯೂ ರಾಗಿಣಿ ಮಾತನಾಡಿದ್ದಾರೆ. ರಾಗಿಣಿ ಭಯವನ್ನು ಮುಚ್ಚಿಡಲು ನಗ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗ್ತಿದೆ. ಅವ್ರ ಮಾತಿನ ಸ್ಟೈಲ್ ಇದು ಸಹಜವಲ್ಲ, ನಾಟಕ ಎನ್ನುವಂತಿತ್ತು. ರಾಗಿಣಿ ನಗುವಿನ ಹಿಂದೆ ಏನಿದೆ ಎಂಬುದು ಪ್ರಕರಣದ ವಿಚಾರಣೆ ಮುಗಿದ ಮೇಲೆಯೇ ಗೊತ್ತಾಗಬೇಕಿದೆ.
ಇಂದು ಬೆಳಿಗ್ಗೆ 6 ಗಂಟೆಗೆ ಸಿಸಿಬಿ ಪೊಲೀಸರು ರಾಗಿಣಿ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಮಹತ್ವದ ದಾಖಲೆ ರಾಗಿಣಿ ಮನೆಯಲ್ಲಿ ಸಿಕ್ಕಿದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ರಾಗಿಣಿಯ ಹೆಚ್ಚಿನ ವಿಚಾರಣೆಗೆ ಅಧಿಕಾರಿಗಳು ಸಿಸಿಬಿ ಕಚೇರಿಗೆ ಕರೆದೊಯ್ತಿದ್ದಾರೆ. ರಾಗಿಣಿಯನ್ನು ಸಿಸಿಬಿ ಪೊಲೀಸರು ಸಂಜೆಯವರೆಗೆ ವಿಚಾರಣೆ ನಡೆಸುವ ಸಾಧ್ಯತೆಯಿದೆ.