
ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಮಹಾಮಾರಿ ನಿಯಂತ್ರಣಕ್ಕಾಗಿ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿ ಶ್ರಮಿಸುತ್ತಿದ್ದು, ಇವರ ಜೊತೆಗೆ ಪೊಲೀಸರೂ ಸಹ ತಮ್ಮದೇ ಆದ ರೀತಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕೊಡುಗೆ ನೀಡುತ್ತಿದ್ದಾರೆ.
ತಮ್ಮ ಸುರಕ್ಷತೆಯನ್ನೂ ಸಹ ಲೆಕ್ಕಿಸದೆ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಪುರಸ್ಕರಿಸುವ ಬದಲು ಶಾಕಿಂಗ್ ಸುದ್ದಿಯನ್ನು ನೀಡಲಾಗಿದೆ. ಕೊರೊನಾ ಲಾಕ್ಡೌನ್ ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಸರಿದೂಗಿಸುವ ಸಲುವಾಗಿ ಪೊಲೀಸ್ ಅಧಿಕಾರಿ / ಸಿಬ್ಬಂದಿಗೆ ವೇತನ ಅರಿಯರ್ಸ್, ಹಬ್ಬದ ಮುಂಗಡ, ವಾರದ ಭತ್ಯೆ ಸೇರಿದಂತೆ ಇನ್ನಿತರ ಭತ್ಯೆಗಳು ಸಿಗುವುದಿಲ್ಲ ಎಂದು ಹೇಳಲಾಗಿದೆ.
2020 – 21 ನೇ ಸಾಲಿನ ಆರ್ಥಿಕ ವರ್ಷದಲ್ಲಿ ವೇತನ ಬಿಲ್ ಗಳನ್ನು ಮಾತ್ರ ಖಜಾನೆ 2ಕ್ಕೆ ಕಳುಹಿಸುವಂತೆ ಎಲ್ಲ ಜಿಲ್ಲೆಯ ರಕ್ಷಣಾಧಿಕಾರಿಗಳು ಹಾಗೂ ಕಮೀಷನರ್ ಗಳಿಗೆ ಸೂಚನೆ ನೀಡಲಾಗಿದ್ದು, ಇನ್ನಿತರ ಭತ್ಯೆಗಳ ಬಿಲ್ ಪಡೆಯಲು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿದೆ.