ಧರ್ಮಸ್ಥಳದಲ್ಲೊಂದು ಕಾರು ಸಂಗ್ರಹಾಲಯವಿದೆ. ಅದು ಮಂಜೂಷಾ ವಸ್ತು ಸಂಗ್ರಹಾಲಯದ ಇನ್ನೊಂದು ಭಾಗ. ಇಲ್ಲಿ ವಾಹನಗಳಿಗೆ ಸಂಬಂಧಪಟ್ಟ ವಿಭಾಗವೊಂದಿದೆ. ಅದರಲ್ಲಿ ಕುದುರೆ ಗಾಡಿ, ಎತ್ತಿನಗಾಡಿ, ದ್ವಿಚಕ್ರ ವಾಹನ ಸೇರಿದಂತೆ ಜೊತೆಗೆ ಪುರಾತನ ಕಾರುಗಳು ಇರುವುದರಿಂದ ಇದಕ್ಕೆ ಮಂಜೂಷಾ ಕಾರ್ ಮ್ಯೂಸಿಯಂ ಎಂಬ ಹೆಸರಿದೆ.
ಈ ಮ್ಯೂಸಿಯಂನಲ್ಲಿ ಇರುವ ಕಾರುಗಳು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಭಾರತದ ಪ್ರಖ್ಯಾತ ನೊಬೆಲ್ ಪುರಸ್ಕ್ರತ ವಿಜ್ಞಾನಿ ದಿ. ಡಾ.ಸಿ.ವಿ. ರಾಮನ್ ಬಳಸುತ್ತಿದ್ದ ಸ್ಟುಡಿಬೇಕರ್ ಚಾಂಪಿಯನ್ ಕಾರು ಇಲ್ಲಿದ್ದು 1947ರಲ್ಲಿ ಅಮೆರಿಕಾದಲ್ಲಿ ಇದು ನಿರ್ಮಾಣವಾಗಿದೆ. ಮಹಾತ್ಮಗಾಂಧಿ ಬಳಸುತ್ತಿದ್ದ ಸ್ಟುಡಿಬೇಕರ್ ಪ್ರೆಸಿಡೆಂಟ್ ಕಾರು ಇಲ್ಲಿದ್ದು 1929 ರಲ್ಲಿ ಅಮೆರಿಕಾದಲ್ಲಿ ನಿರ್ಮಾಣವಾಗಿದೆ.
1949 ರಲ್ಲಿ ನಿರ್ಮಾಣವಾದ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಅವರು ಉಪಯೋಗಿಸುತ್ತಿದ್ದ ಡ್ಯಾಂಮ್ಲರ್ ಕಾರು, 1951 ರ ಇಂಗ್ಲೆಂಡಿನ ಜಾಗ್ವರ್ ಮಾರ್ಕ್ ಕಾರು, 1964 ರ ಇಂಗ್ಲೆಂಡಿನ ಅಸ್ಟಿನ್ ಪ್ರಿನ್ಸೆಸ್ ಕಾರುಗಳು ಸಂಗ್ರಹಾಲಯದ ಪ್ರಮುಖ ಆಕರ್ಷಣೆ.
ಹಳೆಯ, ಅಪರೂಪದ ವಿಂಟೆಜ್ ಕಾರುಗಳು ಈ ಸಂಗ್ರಹಾಲಯದಲ್ಲಿ ಸಾಕಷ್ಟಿದೆ. ಇದರ ಹಿಂದೆ ಧರ್ಮಸ್ಥಳದ ಡಾ. ವೀರೆಂದ್ರ ಹೆಗಡೆ ಅವರ ಆಸಕ್ತಿ ಎದ್ದು ಕಾಣುತ್ತದೆ.