ತುಮಕೂರು: ಉಪಚುನಾವಣೆಗೆ ಕೊರೊನಾ ಕಠಿಣ ನಿಯಮಗಳು ಅನ್ವಯವಾಗುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಸಭೆ-ಸಮಾರಂಭಗಳಿಗೆ ಮಾತ್ರ ಕಠಿಣ ನಿಯಮ ಹಾಕಿದ್ದೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್.ವೈ., ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಈ ನಡುವೆ ಉಪಚುನಾವಣೆ ಕೂಡ ಘೋಷಣೆಯಾಗಿರುವುದರಿಂದ ಕೊರೊನಾ ನಿಯಮ ಪಾಲನೆ ಬಗ್ಗೆ ಸ್ಪಷ್ಟನೆ ನೀಡಿದರು. ಉಪಚುನಾವಣೆಗೆ ಕಠಿಣ ನಿಯಮ ಅನ್ವಯವಿಲ್ಲ ಎಂದರು.
ಆರ್.ಎಸ್.ಎಸ್. ಸರಕಾರ್ಯವಾಹ್ ಆಗಿ ದತ್ತಾತ್ರೇಯ ಹೊಸಬಾಳೆ ಆಯ್ಕೆ
ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶಾಲಾ-ಕಾಲೇಜುಗಳನ್ನು ಬಂದ್ ಮಾಡುವ ಯೋಚನೆ ಸಧ್ಯಕ್ಕಿಲ್ಲ. ಜನರು ಎಚ್ಚೆತುಕೊಳ್ಳದಿದ್ದಲ್ಲಿ, ಕೊರೊನಾ ಪ್ರಕರಣಗಳು ಹೆಚ್ಚಿದರೆ ಕಠಿಣ ನಿಯಮಗಳ ಜಾರಿಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.