ಬಾಗಲಕೋಟೆ: ವಾಹನ ಚಾಲನೆ ವೇಳೆ ಮೊಬೈಲ್ ನಲ್ಲಿ ಮಾತನಾಡುವುದು ಅದೆಷ್ಟು ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತಿರುತ್ತೆ. ಆದರೂ ಅನಿವಾರ್ಯವಾಗಿಯೋ, ಅಗತ್ಯಕ್ಕಾಗಿಯೋ ಫೋನ್ ಮಾಡಲು ಹೋಗಿ ದುರಂತಗಳನ್ನು ತಂದುಕೊಳ್ಳುತ್ತೇವೆ.
ಯೋಧನೊಬ್ಬ ಪತ್ನಿಯನ್ನು ಕೂರಿಸಿಕೊಂಡು ಬೈಕ್ ಓಡಿಸುತ್ತಿದ್ದ ವೇಳೆ ಮಗನ ವಿಡಿಯೋ ಕಾಲ್ ಬಂತು ಎಂದು ಮಾತನಾಡುತ್ತಾ ಬೈಕ್ ಚಲಾಯಿಸಿದ್ದಾರೆ. ಎದುರಿನಲ್ಲಿ ಬಂದ ರೋಡ್ ಹಂಪ್ ಗೊತ್ತಾಗದೇ ಬೈಕ್ ಜಂಪಾದ ಪರಿಣಾಮ ಹಿಂಬದಿ ಕುಳಿತಿದ್ದ ಪತ್ನಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಮೂಗನೂರು ಗ್ರಾಮದ ಬಳಿ ನಡೆದಿದೆ.
ಯೋಧ ಶೇಖರಯ್ಯ ಪತ್ನಿ ಪುಷ್ಪಲತಾ (35) ಮೃತ ದುರ್ದೈವಿ. ಪತ್ನಿಯನ್ನು ತವರು ಮನೆಗೆ ಕರೆದುಕೊಂಡು ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.