ಒಂದು ಕಡೆ ಕೊರೊನಾ ಹಾವಳಿ ಮತ್ತೊಂದೆಡೆ ಮಳೆಯ ಆರ್ಭಟ ಇವೆರಡರಡಿ ಸಿಲುಕಿ ರೈತನ ಜೀವನ ಬೀದಿಯಲ್ಲಿ ಬಿದ್ದಿದೆ. ಇಷ್ಟು ದಿನ ಕೊರೊನಾದಿಂದಾಗಿ ಬೆಳೆದ ಬೆಳೆ ಸರಿಯಾಗಿ ಮಾರಾಟವಾಗುತ್ತಿಲ್ಲ ಅಂತಿದ್ದ ರೈತರಿಗೆ ಇದೀಗ ಮಳೆಯ ಕಾಟ ಆರಂಭವಾಗಿದೆ.
ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ಕಡೆಗಳಲ್ಲಿ ಬೆಳೆದ ಬೆಳೆ ಮಳೆ ಪಾಲಾಗಿದೆ. ಇನ್ನು ಬೇರೆ ಬೇರೆ ರಾಜ್ಯದಲ್ಲಿ ಬರಗಾಲದಿಂದಲೂ ಬೆಳೆ ಸುಟ್ಟು ಹೋಗುತ್ತಿದೆ. ಹೀಗಾಗಿ ರೈತರಿಗೆ ನೆರವಾಗಲಿ ಅಂತಾ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ಪಿಎಂಎಫ್‌ಬಿವೈ ಅನ್ನು ಪ್ರಾರಂಭಿಸಲಾಗಿದೆ.
ಈ ಯೋಜನೆ ಸಂಪೂರ್ಣವಾಗಿ ರೈತರಿಗೆ ಮೀಸಲಾದ ಯೋಜನೆ. ನೈಸರ್ಗಿಕ ವಿಪತ್ತಿನಿಂದಾಗಿ ಬೆಳೆಗಳಿಗೆ ಹಾನಿಯಾದರೆ ಈ ಯೋಜನೆಯನ್ನು ಪಡೆಯಬಹುದು. ಈ ಯೋಜನೆ ಪಡೆದುಕೊಳ್ಳಬೇಕಾದರೆ ಒಂದು ಅಂಶ ಗಮನದಲ್ಲಿರಬೇಕು. ನೈಸರ್ಗಿಕ ವಿಕೋಪದಿಂದ ಬೆಳೆ ನಷ್ಟವಾದರೆ ರೈತ ಮತ್ತು ಗೊತ್ತುಪಡಿಸಿದ ವಿಮಾ ಏಜೆನ್ಸಿಗಳಿಂದ ನಷ್ಟದ ನೋಟೀಸ್ ಸಲ್ಲಿಸುವುದು ಅವಶ್ಯಕವಾಗಿದೆ.
ಮಳೆ, ಬರಗಾಲದಿಂದ ರೈತರಿಗೆ ಬೆಳೆ ನಷ್ಟವಾದರೆ ಸ್ಥಳೀಯ ಕೃಷಿ ಕಚೇರಿಯಲ್ಲಿನ ರೈತರ ಸಹಾಯವಾಣಿ ಸಂಪರ್ಕಿಸಬಹುದು ಅಥವಾ ಬೆಳೆ ವಿಮಾ ಅಪ್ಲಿಕೇಶನ್‌ನಲ್ಲಿ ಈ ಬಗ್ಗೆ ಮಾಹಿತಿ ಸಲ್ಲಿಸಬೇಕು. ಬೆಳೆ ನಷ್ಟದ ಬಗ್ಗೆ 72 ಗಂಟೆಗಳಲ್ಲಿ ಮಾಹಿತಿ ನೀಡಿದರೆ ಯೋಜನೆಯ ಪ್ರಕಾರ ನಷ್ಟದ ಬಗ್ಗೆ ಮಾಹಿತಿ ಪಡೆದ ಪರಿಹಾರ ನೀಡಲಾಗುತ್ತದೆ. ಈ ಯೋಜನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಸಹಾಯವಾಣಿ ಸಂಖ್ಯೆ 18001801551 ನಂಬರ್ ಗೆ ಸಂಪರ್ಕಿಸಬಹುದು.