ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ 5 ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಏರ್ ಪೋರ್ಟ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಬ್ಯಾಟರಾಯನಪುರ ಫ್ಲೈಓವರ್ ಮೇಲೆ ಈ ಘಟನೆ ನಡೆದಿದೆ. ನಿಸಾನ್ ಕಾರು ಡಿವೈಡರ್ ಹಾರಿ ಏರ್ ಪೋರ್ಟ್ ಕಡೆ ಹೊರಟಿದ್ದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ವಿಫ್ಟ್ ಕಾರು ಇಂಡಿಕಾ, ಆಲ್ಟೋ ಸೇರಿದಂತೆ ಇತರೆ ಮೂರು ಕಾರುಗಳಿಗೆ ಡಿಕ್ಕಿಹೊಡೆದಿದೆ.
ಘಟನೆಯಲ್ಲಿ ಸ್ವಿಫ್ಟ್ ಕಾರಲ್ಲಿದ್ದ ನಾಲ್ವರು ಹಾಗೂ ಇಂಡಿಕಾ ಕಾರಿನ ಚಾಲಕ ಸೇರಿ 6 ಜನರು ಗಂಭೀರ ಗಾಯಗೊಂಡಿದ್ದಾರೆ. ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡ ಘಟನೆ ನಡೆದಿದೆ.