ಬೆಂಗಳೂರು: ಮನೆಯ ಮುಂದೆ, ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುವವರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ. ಇನ್ಮುಂದೆ ಬೆಂಗಳೂರಿನಲ್ಲಿ ಹೊಸ ಪಾರ್ಕಿಂಗ್ ನೀತಿ ಜಾರಿಗೆ ಬರಲಿದೆ.
ಮನೆ ಮುಂದೆ ವಾಹನ ನಿಲುಗಡೆ ನಿಷೇಧಿಸಿ ಹಿಂದೊಮ್ಮೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮತ್ತೊಮ್ಮೆ ಪರಿಷ್ಕೃತ ಪಾರ್ಕಿಂಗ್ ನೀತಿ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದ್ದು, ಬಿಬಿಎಂಪಿಗೆ ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರಲಿದೆ.
ಹೊಸ ನೀತಿ ಅನ್ವಯ ಇನ್ಮುಂದೆ ಮನೆಗಳ ಮುಂದೆ ವಾಹನ ನಿಲುಗಡೆಗೂ ಅನುಮತಿ ಕಡ್ಡಾಯವಾಗಿದ್ದು, ಸಣ್ಣ ವಾಹನಗಳಿಗೆ ವಾರ್ಷಿಕ 1000 ರೂ. ಪಾವತಿಸಬೇಕು. ಮಧ್ಯಮ ಗಾತ್ರದ ವಾಹನಗಳಿಗೆ 3000-4000 ರೂ. ಹಾಗೂ ಎಂಯುವಿ, ಎಸ್ ಯು ವಿ ಕಾರುಗಳಿಗೆ 5000 ರೂ. ನಿಗದಿ ಪಡಿಸಲಾಗಿದೆ. ಇನ್ನು ಸ್ಥಳ ಹಾಗೂ ಸಮಯಕ್ಕೆ ತಕ್ಕಂತೆ ಪಾರ್ಕಿಂಗ್ ದರ ನಿಗದಿ ಮಾಡಲಾಗುತ್ತಿದೆ.