
ಮುಖ್ಯಮಂತ್ರಿ ಯಡಿಯೂರಪ್ಪನವರು ಬಹುದಿನಗಳ ಬಳಿಕ ತಮ್ಮ ತವರು ಜಿಲ್ಲೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ಹಲವು ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದಂತೆ ಪಾಲ್ಗೊಂಡಿದ್ದಾರೆ.
ಬುಧವಾರದಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಚೇನಹಳ್ಳಿ ಕೈಗಾರಿಕಾ ಸಂಘದ ಕಾರ್ಯಕ್ರಮ, ಈಡಿಗರ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇದರ ಮಧ್ಯೆ ಹಲವು ಸಂಘ – ಸಂಸ್ಥೆಗಳಿಂದ ಮನವಿಪತ್ರ ಸ್ವೀಕರಿಸಿದ್ದಾರೆ.
ಬಿಜೆಪಿ ಸಂಸದರ ಪುತ್ರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಇದೆಲ್ಲದರ ನಡುವೆಯೂ ಕೊಂಚ ಬಿಡುವು ಮಾಡಿಕೊಂಡ ಯಡಿಯೂರಪ್ಪನವರು ಮೀನಾಕ್ಷಿ ಭವನಕ್ಕೆ ತೆರಳಿ ಉಪಹಾರ ಸವಿದಿದ್ದು, ಅವರಿಗೆ ಪುತ್ರ ರಾಘವೇಂದ್ರ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದಾರೆ.