ಶಿವಮೊಗ್ಗದ ಕಲ್ಲು ಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕಾನಂದ ಸರಸ್ವತಿ ಸ್ವಾಮೀಜಿ ಕೊರೊನಾ ಸೋಂಕು ಪೀಡಿತರಾಗಿದ್ದು, ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಸಂದರ್ಭದಲ್ಲಿ ಸ್ವಾಮೀಜಿಯವರು ತಾವು ಬಾಲ್ಯದಿಂದಲೂ ಆಯುರ್ವೇದ ಪದ್ಧತಿಗೆ ಒಗ್ಗಿಕೊಂಡಿರುವ ಕಾರಣ ಆಲೋಪತಿ ಬದಲು ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡುವಂತೆ ಪಟ್ಟು ಹಿಡಿದಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದರು.
ಆ ಬಳಿಕ ಸ್ವಾಮೀಜಿಯವರ ಆಶಯದಂತೆ ಆಯುಷ್ ವೈದ್ಯರು ಜೀವರಕ್ಷಕ ಔಷಧಗಳನ್ನು ನೀಡಿದ್ದು, 52 ವರ್ಷದ ಸ್ವಾಮೀಜಿ ಈಗ ಗುಣಮುಖರಾಗಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ, ಆಯುರ್ವೇದ ಚಿಕಿತ್ಸೆಯ ಫಲವಾಗಿಯೇ ಬೇಗನೆ ಗುಣಮುಖನಾಗಿದ್ದೇನೆ ಎಂದು ತಿಳಿಸಿದ್ದಾರೆ.