
ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ನಟಿ ಸಂಜನಾ ಗಲ್ರಾಣಿ ಅವರ ಮದುವೆ ರಹಸ್ಯ ಬಯಲಾಗಿದೆ. ಸಂಜನಾ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸಂಜನಾ ತನಗೆ ಇನ್ನೂ ಮದುವೆಯಾಗಿಲ್ಲ ಎಂದು ಹೇಳುತ್ತಿದ್ದರು. ಕೆಲ ದಿನಗಳ ಹಿಂದೆ ಕೂಡ ಇದೇ ಮಾತನ್ನು ಹೇಳಿದ್ದರು. ಡ್ರಗ್ಸ್ ಗೂ ತನಗೂ ಯಾವುದೇ ಸಂಬಂಧವಿಲ್ಲ. ಇನ್ನೂ ಮದುವೆಯಾಗದ ತನ್ನ ಮೇಲೆ ಡ್ರಗ್ಸ್ ಆರೋಪಗಳನ್ನು ಮಾಡಿದರೆ ಮುಂದೆ ತಾನು ಮದುವೆಯಾಗುವುದಾದರು ಹೇಗೆ ಎಂದು ಪ್ರಶ್ನಿಸಿದ್ದರು. ಆದರೆ ಈಗಾಗಲೇ ಸಂಜನಾ ಮದುವೆಯಾಗಿದ್ದಾರೆ ಎಂಬುದು ಬಹಿರಂಗವಾಗಿದೆ.
ನಟಿ ಸಂಜನಾ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯ ಹಾರ್ಟ್ ಸ್ಪೆಷಲಿಸ್ಟ್ ಅಜೀಜ್ ಎಂಬುವವರನ್ನು ವಿವಾಹವಾಗಿದ್ದಾರೆ. ಈ ಮದುವೆ ಕಾರ್ಯಕ್ರಮಕ್ಕೆ ಕೇವಲ 20 ಜನರು ಮಾತ್ರ ಭಾಗಿಯಾಗಿದ್ದರು. ಆದರೆ ತಮ್ಮ ಮದುವೆ ವಿಚಾರವನ್ನು ಸಂಜನಾ ರಹಸ್ಯವಾಗಿಟ್ಟಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ ಸಂಜನಾ ತಂದೆ ತಾನು ಅನಾರೋಗ್ಯದಲ್ಲಿದ್ದಾಗ ಸಂಜನಾ ಪತಿಯೇ ತನಗೆ ಚಿಕಿತ್ಸೆ ನೀಡಿರುವುದಾಗಿ ಕೂಡ ಹೇಳಿದ್ದರು. ಆದರೆ ಸಂಜನಾ ಮಾತ್ರ ತನಗಿನ್ನೂ ಮದುವೆಯಾಗಿಲ್ಲ ಎನ್ನುತ್ತಿದ್ದರು. ಇಬ್ಬರ ಹೇಳಿಕೆ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಸಂಜನಾ ಮದುವೆಯಾಗಿರುವುದು ನಿಜ ಎನ್ನಲಾಗುತ್ತಿದೆ.