ಭಾರತದ ಎರಡನೆಯ ಅತಿ ದೊಡ್ಡ ಹುಲಿ ಸಂರಕ್ಷಣಾ ನೆಲೆ ಬಂಡೀಪುರ ರಾಷ್ಟ್ರೀಯ ಉದ್ಯಾನವು ವಯನಾಡ್, ಮುದುಮಲೈ ಮತ್ತು ನಾಗರಹೊಳೆಯೊಂದಿಗೆ ಗಡಿ ಹಂಚಿಕೊಂಡಿದೆ. ಇದು ದಕ್ಷಿಣ ಏಷ್ಯಾದ ಕಾಡು ಅನೆಗಳ ಅತಿ ದೊಡ್ಡ ವಾಸಸ್ಥಾನವೂ ಹೌದು. ಮೈಸೂರಿಗೆ ಬಂದ ಬಹುತೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿದೆ.
ಇಲ್ಲಿ ಹುಲಿ, ಕಾಡು ನಾಯಿ, ಕಾಡು ಹಂದಿ, ಕರಡಿ, ಚಿರತೆ, ಜಿಂಕೆ, ಕಡವೆ, ಮಲಬಾರ್ ಅಳಿಲುಗಳು ಮತ್ತಿತರ ಪ್ರಾಣಿಗಳು ಕಾಣಸಿಗುತ್ತವೆ. ಅರಣ್ಯ ಇಲಾಖೆಯಿಂದ ಪ್ರತಿದಿನ ಎರಡು ಬಾರಿ ಸಫಾರಿ ನಡೆಸಲಾಗುತ್ತದೆ. ಒಂದು ಗಂಟೆ ಅವಧಿಯ ಬಸ್ ಸಫಾರಿ, ಜೀಪ್ ಸಫಾರಿಗಳು ಹೆಚ್ಚು ಸೂಕ್ತವಾಗಿವೆ.
ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಇಲ್ಲಿಗೆ ಭೇಟಿ ನೀಡುವುದು ಉತ್ತಮ. ಇದು ಬೆಂಗಳೂರಿನಿಂದ 220 ಕಿ.ಮೀ. ದೂರದಲ್ಲಿದೆ. ವಾಹನಗಳ ಅಪಘಾತ ತಪ್ಪಿಸಲು ರಾತ್ರಿ 9 ರಿಂದ ಬೆಳಗಿನ 6 ರವರೆಗೆ ಇಲ್ಲಿ ಯಾವುದೇ ವಾಹನ ಪ್ರಯಾಣಿಸುವುದಿಲ್ಲ. ರಾಷ್ಟ್ರೀಯ ಉದ್ಯಾನವನದ ಹೊರಗೆ ಬಂಡೀಪುರ ಸಫಾರಿ ಲಾಡ್ಜ್ ಇದೆ. ಇದರ ಹೊರತಾಗಿಯೂ ಕೆಲವು ಖಾಸಗಿ ರೆಸಾರ್ಟ್ ಗಳಿವೆ.