ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರಿಗೆ ಫೇಸ್ ಬುಕ್ ನಲ್ಲಿ ಪರಿಚಿತನಾದ ಫೈನಾನ್ಸಿಯರ್, ಸ್ನೇಹ – ಪ್ರೀತಿ ಹೆಸರಲ್ಲಿ ಇದೀಗ ಬರೋಬ್ಬರಿ 15 ಲಕ್ಷ ರೂಪಾಯಿ ದೋಚಿರುವ ಘಟನೆ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಫೇಸ್ ಬುಕ್ ನಲ್ಲಿ ಪರಿಚಿತನಾದ ಚಿಂತಾಮಣಿಯ ಇಡ್ಲಿಪಾಳ್ಯ ನಿವಾಸಿ ಸತೀಶ್ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದಾನೆ. ಬರಬರುತ್ತಾ ಸ್ನೇಹ, ಪ್ರೀತಿ-ಪ್ರೇಮಕ್ಕೆ ತಿರುಗಿದ್ದು, ಪ್ರಣಯದವರೆಗೂ ಮುಂದುವರೆದಿದೆ. ಇದೀಗ ಕಿರಾತಕ ತನ್ನ ಅಸಲಿ ರೂಪ ತೋರಿಸಿದ್ದು, ಮಹಿಳೆಯನ್ನು ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣ ದೋಚಿದ್ದಾನೆ.
ಜೈಲಿನಿಂದ ಬಿಡುಗಡೆಯಾಗುತ್ತಲೇ ಭಯೋತ್ಪಾದಕನಿಂದ ಮಲಾಲಾಗೆ ಮತ್ತೆ ಬೆದರಿಕೆ
ಹಣ ನೀಡದಿದ್ದರೆ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹಾಕುವುದಾಗಿ ಬೆದರಿಸಿ ಮಹಿಳೆಯ ಹೆಸರಲ್ಲಿದ್ದ ಸೈಟನ್ನೂ ಮಾರಿಸಿದ್ದು, ಬರೋಬ್ಬರಿ 15 ಲಕ್ಷ ರೂಪಾಯಿಯನ್ನು ವಂಚಿಸಿದ್ದಾನೆ. ಇದೀಗ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.