ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಇಂಗ್ಲೀಷ್ ಹೊರತುಪಡಿಸಿ ಇತರೆಲ್ಲಾ ವಿಷಯಗಳಲ್ಲೂ ಅಧಿಕ ಅಂಕ ಗಳಿಸಿದ್ದ ವಿದ್ಯಾರ್ಥಿನಿಯೊಬ್ಬರು, ಇಂಗ್ಲಿಷ್ ನಲ್ಲಿ ಕೇವಲ 7 ಅಂಕ ಬಂದ ಕಾರಣ ಫೇಲ್ ಆಗಿದ್ದರು.
ಈ ಕಾರಣಕ್ಕಾಗಿ ವಿದ್ಯಾರ್ಥಿನಿ ಮರು ಪರಿಶೀಲಿಸುವಂತೆ ಪಿಯು ಪರೀಕ್ಷಾ ಮಂಡಳಿಗೆ ಮನವಿ ಮಾಡಿದ್ದು, ಮರು ಪರಿಶೀಲನೆ ವೇಳೆ ಇಂಗ್ಲಿಷ್ ನಲ್ಲಿ 7 ಅಂಕ ಗಳಿಸಿದ್ದ ವಿದ್ಯಾರ್ಥಿನಿಗೆ 75 ಅಂಕಗಳು ಬಂದಿವೆ.
ಹೀಗಾಗಿ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ಚೈತ್ರ ಇದೀಗ ಒಟ್ಟು 555 ಅಂಕ ಗಳಿಸುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಈಕೆ ಕಂಪ್ಲಿಯ ಎಸ್.ಜಿ.ವಿ.ಎಸ್.ಎಸ್. ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.