ಬೆಂಗಳೂರು: ಪ್ರೀತಿಸಲು ನಿರಾಕರಿಸಿದ್ದ ಯುವತಿಗೆ ಮನಬಂದಂತೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಪಾಗಲ್ ಪ್ರೇಮಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದೀಪಕ್ ಬಂಧಿತ ಆರೋಪಿ. ಕಳೆದ ಎರಡು ವರ್ಷಗಳಿಂದ ದೀಪಕ್ ಯುವತಿಯೊಬ್ಬಳ ಹಿಂದೆ ಬಿದ್ದು ಪ್ರೀತಿಸುವಂತೆ ಬಲವಂತ ಮಾಡುತ್ತಿದ್ದ. ಆದರೆ ಯುವತಿ ಇದಕ್ಕೆ ಒಪ್ಪಿರಲಿಲ್ಲ.
ಅಶ್ಲೀಲ ವಿಡಿಯೋ ಅಪ್ ಲೋಡ್ ಮಾಡಿದ ನಟಿ, ನಿರೂಪಕಿ ಅರೆಸ್ಟ್
ಕಳೆದ 15 ದಿನಗಳ ಹಿಂದೆ ಯುವತಿ ಮನೆ ಬಳಿ ಬಂದು ಮತ್ತೆ ತನ್ನನ್ನು ಮದುವೆಯಾಗುವಂತೆ ಹೇಳಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ ಗಲಾಟೆ ಆರಂಭವಾಗಿದೆ. ಇದರಿಂದ ಕೋಪಗೊಂಡ ದೀಪಕ್, ಯುವತಿಯ ಹೊಟ್ಟೆ, ಬೆನ್ನು, ಕೈಗಳಿಗೆ ಚಾಕಿವಿನಿಂದ ಮನಬಂದಂತೆ ಇರಿದು ಪರಾರಿಯಾಗಿದ್ದ. ಈ ಕುರಿತು ಯುವತಿ ಪೋಷಕರು ನಂದಿನಿ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಪಾಗಲ್ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ.