
ಮೈಸೂರು: ಪ್ರಿ-ವೆಡ್ಡಿಂಗ್ ಫೋಟೋಶೂಟ್ ವೇಳೆ ನದಿಯಲ್ಲಿ ತೆಪ್ಪ ಮುಳುಗಿ ವಧು-ವರ ಇಬ್ಬರೂ ಸಾವನ್ನಪ್ಪಿರುವ ದುರಂತ ಘಟನೆ ತಲಕಾಡಿನಲ್ಲಿ ನಡೆದಿದೆ.
ವರ ಚಂದ್ರು ಹಾಗೂ ವಧು ಶಶಿಕಲಾ ಮೃತ ದುರ್ದೈವಿಗಳು. ಮೈಸೂರು ಜಿಲ್ಲೆ ತಲಕಾಡು ಬಳಿ ಕಾವೇರಿ ನದಿಯಲ್ಲಿ ತೆಪ್ಪದಲ್ಲಿ ನಿಂತು ಪ್ರಿ-ವೆಡ್ದಿಂಗ್ ಫೋಟೋಶೂಟ್ ಮಾಡಲು ಮುಂದಾಗಿದ್ದರು. ತೆಪ್ಪದಲ್ಲಿ ನಿಲ್ಲುತ್ತಿದ್ದಂತೆಯೇ ತೆಪ್ಪ ಮುಳುಗಲು ಆರಂಭವಾಗಿದೆ. ವಧು ನೀರಿಗೆ ಬೀಳುತ್ತಿದ್ದಂತೆಯೇ ಆಕೆಯನ್ನು ರಕ್ಷಿಸಲು ಹೋಗಿ ವರನು ಕೂಡ ನೀರುಪಾಲಾಗಿದ್ದಾನೆ. ಫೋಟೋಗ್ರಾಫರ್ ಕಣ್ಮುಂದೆಯೇ ವಧು-ವರರು ದುರಂತ ಅಂತ್ಯ ಕಂಡಿದ್ದಾರೆ.
ಸ್ಥಳಕ್ಕೆ ತಲಕಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.