ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನನ್ನ ಯೋಜನೆಗಳನ್ನು ಹೈಜಾಕ್ ಮಾಡಿದ್ದಾರೆ. ಕಾಂಪೀಟ್ ವಿತ್ ಚೀನಾ ಯೋಜನೆ ಜಾರಿಗೆ ತಂದಿದ್ದು ನಾನು. ಆದರೆ ಪ್ರಧಾನಿ ಮೋದಿ ನನ್ನ ಪ್ರಾಜೆಕ್ಟ್ ಹೈಜಾಕ್ ಮಾಡಿ ಈಗ ತಾವು ಹೊಸದಾಗಿ ಜಾರಿಗೆ ತಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಮ್ಮಿಶ್ರ ಸರ್ಕಾರದ ಮಧ್ಯಂತರ ಬಜೆಟ್ ವೇಳೆ ನಾನೇ ಚೀನಾ ವಸ್ತುಗಳನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಚೀನಾದೊಂದಿಗೆ ಸ್ಪರ್ಧೆ ಎಂಬ ಯೋಜನೆ ಘೋಷಿಸಿದ್ದೆ. ಈಗ ಪ್ರಧಾನಿ ಮೋದಿ ನನ್ನ ಯೋಜನೆಯನ್ನು ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಿದರು.
ಲೂಟಿಕೋರರನ್ನು ಆಯ್ಕೆ ಮಾಡಬಾರದು ಎಂದು ಪ್ರಧಾನಿ ಮೋದಿಯವರೇ ಹೇಳಿದ್ದಾರೆ. ಅಂದಮೇಲೆ ರಾಜ್ಯದಲ್ಲೂ ಪ್ರಧಾನಿ ಮೋದಿ ಹೇಳಿಕೆ ಪಾಲನೆಯಾಗಬೇಕಲ್ಲವೇ? ಹಾಗಾಗಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಮತ ನೀಡದೇ ಉಪ ಚುನಾವಣೆಯಲ್ಲಿ ಸೋಲಿಸಿ ಎಂದು ಕರೆ ನೀಡಿದರು.